ಅಭಿಮಾನಿಗಳ ಆಕ್ರೋಶದ ನಡುವೆಯೇ ಅರ್ಧಶತಕ ದಾಖಲಿಸಿದ ಅಭಿನವ್ ಮುಕುಂದ್

ಶನಿವಾರ, 29 ಜುಲೈ 2017 (09:44 IST)
ಗಾಲೆ: ಸಿಕ್ಕಿದ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ಶ್ರೀಲಂಕಾ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕಳಪೆ ಮೊತ್ತಕ್ಕೆ ಔಟಾದ ಅಭಿನವ್ ಮುಕುಂದ್ ವೃತ್ತಿ ಜೀವನಕ್ಕೆ ಶ್ರದ್ಧಾಂಜಲಿ ಸಮರ್ಪಿಸುವ ಮೂಲಕ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.


ಆದರೆ ದ್ವಿತೀಯ ಇನಿಂಗ್ಸ್ ನಲ್ಲಿ 82 ರನ್ ಗಳಿಸಿದ ಮುಕುಂದ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಅಲ್ಲದೆ, ಮೊದಲ ಇನಿಂಗ್ಸ್ ನ ಶತಕಧಾರಿಗಳಾದ ಚೇತೇಶ್ವರ ಪೂಜಾರ ಮತ್ತು ಶಿಖರ್ ಧವನ್ ದ್ವಿತೀಯ ಇನಿಂಗ್ಸ್ ನಲ್ಲಿ ಕಳಪೆ ಮೊತ್ತಕ್ಕೆ ಔಟಾಗಿ ಆಘಾತ ಮೂಡಿಸಿದ್ದಾಗ ನಾಯಕ ಕೊಹ್ಲಿ ಜತೆ ಸೇರಿಕೊಂಡು ಮಹತ್ವದ ಜತೆಯಾಟವಾಡಿದ್ದಾರೆ.

ಆದರೆ ಶತಕ ಸ್ವಲ್ಪದರಲ್ಲೇ ಅವರ ಕೈ ತಪ್ಪಿದೆ. ದಿನದಾಟದ ನಂತರ ಮಾತನಾಡಿದ ಅವರು ‘ನಾನು ಹಿಂದೆ ಏನಾಗಿದೆಯೋ, ಮುಂದೆ ಏನಾಗುತ್ತದೋ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ. ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಮಾತ್ರ ಯೋಚಿಸುತ್ತೇನೆ’ ಎಂದು ತಮ್ಮ ಫಾರ್ಮ್ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ..  ಶ್ರೀಲಂಕಾ ಟೆಸ್ಟ್ ನಲ್ಲಿ ನೂತನ ದಾಖಲೆ ಬರೆದ ಕೊಹ್ಲಿ, ಧವನ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ