IND vs ENG: ಆಕಾಶ್ ದೀಪ್ ಫಿಫ್ಟಿ ಹೊಡೆದಿದ್ದಕ್ಕೆ ಹೆಲ್ಮೆಟ್ ತೆಗಿ ಎಂದು ಸಿಗ್ನಲ್ ಕೊಟ್ಟ ಶುಭಮನ್ ಗಿಲ್

Krishnaveni K

ಶನಿವಾರ, 2 ಆಗಸ್ಟ್ 2025 (17:23 IST)
Photo Credit: X
ಲಂಡನ್: ಭಾರತ ಮತ್ತುಇಂಗ್ಲೆಂಡ್ ನಡುವೆ ನಡೆಯುತ್ತಿರುವ ಐದನೇ ಟೆಸ್ಟ್ ಪಂದ್ಯದಲ್ಲಿ ಬೌಲರ್ ಆಕಾಶ್ ದೀಪ್ ಅರ್ಧಶತಕ ಸಿಡಿಸಿದ್ದಾರೆ. ಆಕಾಶ್ ಫಿಫ್ಟಿ ಹೊಡೆಯುತ್ತಿದ್ದಂತೇ ಪೆವಿಲಿಯನ್ ನಲ್ಲಿದ್ದ ನಾಯಕ ಶುಭಮನ್ ಗಿಲ್ ಹೆಲ್ಮೆಟ್ ತೆಗಿ ಎಂದು ಸಿಗ್ನಲ್ ಕೊಟ್ಟಿದ್ದಾರೆ.

ನಿನ್ನೆ ಭಾರತ ದ್ವಿತೀಯ ಇನಿಂಗ್ಸ್ ನಲ್ಲಿ 70 ರನ್ ಗೆ ಸಾಯಿ ಸುದರ್ಶನ್ ವಿಕೆಟ್ ಕಳೆದುಕೊಂಡಾಗ ಆಕಾಶ್ ದೀಪ್ ರನ್ನು ನೈಟ್ ವಾಚ್ ಮನ್ ಆಗಿ ಬ್ಯಾಟಿಂಗ್ ಗೆ ಕಳುಹಿಸಲಾಯಿತು. ಆದರೆ ಆಕಾಶ್ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದು ನಿನ್ನೆ ಅಜೇಯರಾಗುಳಿದು ಇಂದು ಅರ್ಧಶತಕ ಸಿಡಿಸಿದ್ದಾರೆ. ಇದು ಅವರಿಗೆ ಚೊಚ್ಚಲ ಅರ್ಧಶತಕವಾಗಿದೆ.

ಆಕಾಶ್ ದೀಪ್ ಅರ್ಧಶತಕ ಸಿಡಿಸುತ್ತಿದ್ದಂತೇ ಪೆವಿಲಿಯನ್ ನಲ್ಲಿ ಟೀಂ ಇಂಡಿಯಾದ ಎಲ್ಲರೂ ಖುಷಿಯಿಂದ ಚಪ್ಪಾಳೆ ತಟ್ಟಿದ್ದಾರೆ. ಸದಾ ಗಂಭೀರವಾಗಿರುವ ಗಂಭೀರ್ ಮೊಗದಲ್ಲೂ ನಗು ಕಾಣಿಸಿಕೊಂಡಿದೆ. ಇನ್ನು, ಕ್ಯಾಪ್ಟನ್ ಗಿಲ್ ಮತ್ತು ಹಿರಿಯ ಆಲ್ ರೌಂಡರ್ ರವೀಂದ್ರ ಜಡೇಜಾ ಅಂತೂ ಹೆಲ್ಮೆಟ್ ತೆಗೆದು ಸೆಲೆಬ್ರೇಟ್ ಮಾಡು ಎಂದು ಸಿಗ್ನಲ್ ಕೊಟ್ಟಿದ್ದಾರೆ.

ಇನ್ನು, ಮೊದಲ ಇನಿಂಗ್ಸ್ ನಲ್ಲಿ ಕೇವಲ 224 ರನ್ ಗಳಿಗೆ ಆಲೌಟ್ ಆಗಿದ್ದ ಭಾರತ ದ್ವಿತೀಯ ಇನಿಂಗ್ಸ್ ನಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಿದೆ. ಇತ್ತೀಚೆಗಿನ ವರದಿ ಬಂದಾಗ 3 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದೆ. ಆಕಾಶ್ ದೀಪ್ 66 ರನ್ ಗಳಿಸಿ ಈಗಷ್ಟೇ ಔಟಾಗಿದ್ದರೆ ಯಶಸ್ವಿ ಜೈಸ್ವಾಲ್ 84 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ