ಜೈಪುರ ಪೊಲೀಸರ ನಂತರ ಇದೀಗ ಪಾಕ್ ಪೊಲೀಸರಿಂದ ಜಸ್ಪ್ರೀತ್ ಬುಮ್ರಾ ನೋ ಬಾಲ್ ಬಳಕೆ

ಭಾನುವಾರ, 25 ಜೂನ್ 2017 (17:10 IST)
ಫೈಸಲಾಬಾದ್: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ವೇಗಿ ಎಸೆದ ನೋ ಬಾಲ್ ನ್ನು ಇತ್ತೀಚೆಗೆ ಜೈಪುರ ಪೊಲೀಸರು ಸಂಚಾರಿ ನಿಯಮ ಪಾಲನೆ ಜಾಹೀರಾತಿಗೆ ಬಳಸಿ ವೇಗಿಯ ಕೆಂಗಣ್ಣಿಗೆ ಗುರಿಯಾಗಿದ್ದರು.

 
ಬುಮ್ರಾ ಟ್ವಿಟರ್ ನಲ್ಲಿ ಇದಕ್ಕೆ ಆಕ್ಷೇಪವೆತ್ತಿದ್ದಕ್ಕೆ ಜೈಪುರ ಪೊಲೀಸರು ಆ ಜಾಹೀರಾತನ್ನು ಅಳಿಸಿದ್ದರಲ್ಲದೆ, ನಿಮ್ಮನ್ನು ನೋಯಿಸುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಸಂದೇಶ ಕಳುಹಿಸಿದ್ದರು.

ಆದರೆ ಅದೇ ಜಾಹೀರಾತನ್ನು ಪಾಕಿಸ್ತಾನದ ಫೈಸಲಾಬಾದ್ ಸಂಚಾರಿ ಪೊಲೀಸರು ಬಳಸಿ ಭಾರತೀಯ ವೇಗಿಯನ್ನು ಅಪಹಾಸ್ಯಕ್ಕೆ ಗುರಿಯಾಗಿಸಿದ್ದಾರೆ. ಅದೇ ಫೋಟೋ ಮತ್ತು ಅದೇ ಸಂದೇಶವನ್ನು ಅಲ್ಲಿನ ಪೊಲೀಸರು ಬಳಸಿ ಸಂಚಾರಿ ನಿಯಮವನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಇದಕ್ಕೀಗ ಬುಮ್ರಾ ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ