ನಿವೃತ್ತಿಯಾದ ಮೇಲೂ ಸಚಿನ್ ತೆಂಡುಲ್ಕರ್ ಮಾಡಿದ ಈ ದಾಖಲೆ ಏನು ಗೊತ್ತಾ?

ಶುಕ್ರವಾರ, 2 ಡಿಸೆಂಬರ್ 2016 (11:51 IST)
ಮುಂಬೈ: ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಎಂದರೆ ದಾಖಲೆಗಳ ಮಹಾಪೂರ. ಅವರು ಕ್ರಿಕೆಟ್ ಮೈದಾನದಲ್ಲಿ ಮಾಡಿದ್ದೆಲ್ಲಾ ದಾಖಲೆಗಳೇ. ಇಂತಿಪ್ಪ ಸಚಿನ್ ನಿವೃತ್ತಿಯಾಗಿ ಸಮಯವಾದದರೂ ಒಂದು ದಾಖಲೆ ಮಾಡಿದ್ದಾರೆ.

ನಿವೃತ್ತರಾದ ಮೇಲೆ ಅವರು ಬರೆದ ಆತ್ಮಕತೆ ಪ್ಲೇಯಿಂಗ್ ಇಟ್ ಮೈ ವೇ ಭಾರೀ ಜನಪ್ರಿಯವಾಗಿತ್ತು. ಈ ಪುಸ್ತಕದ ಬಗ್ಗೆ ಹಲವಾರು ಚರ್ಚೆಗಳು ನಡೆದವು. ಆ ಪುಸ್ತಕ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆಯಾಯಿತು. ಅದೀಗ ವರ್ಷದ ಪುಸ್ತಕ ಎಂಬ ಗೌರವಕ್ಕೆ ಪಾತ್ರವಾಗಿದೆ.

ಆತ್ಮಕತೆಗಳ ವಿಭಾಗದಲ್ಲಿ ಸಚಿನ್ ಪುಸ್ತಕ ಕ್ರಾಸ್ ವರ್ಡ್ ಇಯರ್ ಆಫ್ ದಿ ಬುಕ್ ಪ್ರಶಸ್ತಿ ಪಡೆದಿದೆ. ಈ ಪುಸ್ತಕವನ್ನು ಕ್ರಿಕೆಟ್ ಇತಿಹಾಸಕಾರ ಬೊರಿಯಾ ಮಜುಂದಾರ್ ಬರೆದಿದ್ದರು. ಈ ಗೌರವಕ್ಕೆ ಪಾತ್ರವಾಗಲು ಕಾರಣರಾದ ಎಲ್ಲಾ ಅಭಿಮಾನಿಗಳಿಗೂ ಸಚಿನ್ ತೆಂಡುಲ್ಕರ್  ಕೃತಜ್ಞತೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ