ಸಚಿನ್‌ಗೆ ಸಿಕ್ಕಿದ ಬಳಿಕ ವಿರಾಟ್ ಕೊಹ್ಲಿಗೆ ಭಾರತ್ ರತ್ನ ನೀಡಲು ಮನವಿ

ಶನಿವಾರ, 25 ಜೂನ್ 2016 (17:14 IST)
ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅತ್ಯಂತ ಸುಧಾರಿತ ಅಂತಾರಾಷ್ಟ್ರೀಯ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮದೆ ಪ್ರಸಕ್ತ ಶ್ರೇಷ್ಟ ಫಾರಂ ಹೊಂದಿರುವ ಆಟಗಾರನಾಗಿ ಹೊರಹೊಮ್ಮಿದ್ದಾರೆ.  ಕಳೆದ ವರ್ಷ ದೀರ್ಘಾವಧಿ ಮಾದರಿ ಕ್ರಿಕೆಟ್‌ನಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಕೊಹ್ಲಿ, ಈ ವರ್ಷ ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ತಮ್ಮ ರೋಮಾಂಚಕಾರಿ ಫಾರಂ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು. 
 
ಆಸ್ಟ್ರೇಲಿಯಾದಲ್ಲಿ ಜನವರಿಯಿಂದ ಮತ್ತು ಮೇನಲ್ಲಿ ಐಪಿಎಲ್‌ನಲ್ಲಿ 27 ವರ್ಷದ ಕೊಹ್ಲಿ ತಮ್ಮ ಮನಮೋಹಕ ನಾಕ್‌ಗಳ ಮೂಲಕ ಪ್ರತಿಭೆಯನ್ನು ಪ್ರದರ್ಶಿಸಿದ್ದರು.

ದೆಹಲಿ ಬ್ಯಾಟ್ಸ್‌ಮನ್ ಉಂಟುಮಾಡಿದ ಪರಿಣಾಮದಿಂದ ಅಖಿಲ ಭಾರತ ಕ್ರೀಡಾ ಒಕ್ಕೂಟವು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಕೊಹ್ಲಿಗೆ ಭಾರತ್ ರತ್ನ ನೀಡಬೇಕೆಂದು ಬೇಡಿಕೆ ಮಂಡಿಸಿದೆ.  ಭಾರತ ರತ್ನ ಅತ್ಯನ್ನುತ ನಾಗರಿಕ ಪ್ರಶಸ್ತಿಯಾಗಿದ್ದು, ಕ್ರೀಡಾಪಟುಗಳಲ್ಲಿ ಸಚಿನ್ ತೆಂಡೂಲ್ಕರ್ ಮಾತ್ರ ಈ ಗೌರವಕ್ಕೆ ಪಾತ್ರರಾಗಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ