ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸಿದ ಐಪಿಎಲ್ ನ ಪುಣೆ ತಂಡ ಮಾಡಿದ ಕೆಲಸವಿದು!

ಸೋಮವಾರ, 27 ಮಾರ್ಚ್ 2017 (09:16 IST)
ಪುಣೆ: ಐಪಿಎಲ್ ನ ಈ ವರ್ಷದ ಆವೃತ್ತಿಯಲ್ಲಿ ಧೋನಿ ತಮ್ಮ ಪುಣೆ ತಂಡದ ನಾಯಕರಾಗಿರುವುದಿಲ್ಲ ಎಂಬುದು ಈಗಾಗಲೇ ಗೊತ್ತಿರುವ ಸಂಗತಿ. ಧೋನಿ ನಾಯಕತ್ವ ಕಳೆದುಕೊಂಡ ಬೆನ್ನಲ್ಲೇ ಪುಣೆ ತಂಡ ಹೆಸರೂ ಬದಲಾಯಿಸಿಕೊಂಡಿದೆ.

 

ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಎಂದು ಈ ಮೊದಲಿದ್ದ ಹೆಸರನ್ನು ರೈಸಿಂಗ್ ಪುಣೆ ಸೂಪರ್ ಜೈಂಟ್ ಎಂದು ಬದಲಾಯಿಸಿಕೊಂಡಿದೆ. ಈ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. 10 ನೇ ಆವೃತ್ತಿಯಲ್ಲಿ ಪುಣೆ ತಂಡವನ್ನು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ.

 
ಧೋನಿ ವಿಕೆಟ್ ಕೀಪರ್ ಆಗಿ ಮುಂದುವರಿಯಲಿದ್ದಾರೆ.  ತಂಡದ ಆಟಗಾರರೆಲ್ಲರೂ ಸೂಪರ್ ಜೈಂಟ್ ಗಳೇ ಹಾಗಾಗಿ ಈ ಹೆಸರು ಬದಲಾವಣೆ. ಇದರ ಹಿಂದೆ ಯಾವುದೇ ಮೂಢನಂಬಿಕೆಗಳಿಲ್ಲ ಎಂದು ತಂಡದ ಮೂಲಗಳು ತಿಳಿಸಿವೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ