ಇನ್ಮುಂದೆ ವಿಕೆಟ್ ಬಿದ್ದರೆ ನಮಸ್ತೆ ಮಾಡಿ ಸಂಭ್ರಮಿಸುವುದಾಗಿ ಹೇಳಿದ ಟೀಂ ಇಂಡಿಯಾ ಕ್ರಿಕೆಟಿಗ

ಗುರುವಾರ, 7 ಮೇ 2020 (09:13 IST)
ಮುಂಬೈ: ಕೊರೋನಾವೈರಸ್ ಎಂಬ ಮಹಾಮಾರಿ ಜನರ ಜೀವನ, ವರ್ತನೆಗಳಲ್ಲಿ ಎಷ್ಟು ಬದಲಾವಣೆ ತಂದಿದೆ ಎಂಬುದಕ್ಕೆ ಇದೂ ಒಂದು ಸಾಕ್ಷಿ. ಇನ್ಮುಂದೆ ವಿಕೆಟ್ ಬಿದ್ದಾಗ ನಮಸ್ತೆ ಮಾಡಿ ಸಂಭ್ರಮಿಸುವುದಾಗಿ ಕ್ರಿಕೆಟಿಗ ಅಜಿಂಕ್ಯಾ ರೆಹಾನೆ ಹೇಳಿದ್ದಾರೆ.


ಕ್ರಿಕೆಟ್ ಪಂದ್ಯಗಳು ಯಾವಾಗ ಪುನರಾರಂಭವಾಗುತ್ತದೆ ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ. ಆದರೆ ಜಗತ್ತಿನ ಎಲ್ಲಾ ಕ್ರೀಡಾಪಟುಗಳೂ ಕೊರೋನಾದ ಪರಿಣಾಮ ಎದುರಿಸುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮೈದಾನದಲ್ಲಿ ಆಟಗಾರರ ವರ್ತನೆಯಲ್ಲೂ ಈ ಕೊರೋನಾ ಬದಲಾವಣೆ ತರಲಿದೆ ಎಂಬುದು ಪಕ್ಕಾ.

ಇದೀಗ ಅಜಿಂಕ್ಯಾ ರೆಹಾನೆ ಕೂಡಾ ಅದೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಇನ್ನು ಮುಂದೆ ವಿಕೆಟ್ ಬಿದ್ದಾಗ ಬೌಂಡರಿ ಗೆರೆಯಿಂದ ಆಟಗಾರರು ಓಡಿ ಬಂದು ಬೌಲರ್ ನನ್ನು ಅಭಿನಂದಿಸಬೇಕಿಲ್ಲ. ಅಲ್ಲಿಂದಲೇ ನಮಸ್ತೆ ಮಾಡಿ ಸಂಭ್ರಮಿಸಿದರಾಯಿತು. ಯಾವುದನ್ನೂ ಹಗುರವಾಗಿ ಪರಿಗಣಿಸಲಾಗದು. ಕೊರೋನಾ ನಮ್ಮ ಜೀವನದ ಮೇಲೆ ಅಷ್ಟರಮಟ್ಟಿಗೆ ಪ್ರಭಾವ ಬೀರಿದೆ ಎಂದು ರೆಹಾನೆ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ