ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಧೋನಿ ರೋಹಿತ್ ಶರ್ಮಾ ಜೋಡಿ 137 ರನ್ ಗಳ ಜತೆಯಾಟವಾಡಿ ಸಂಕಷ್ಟದ ಸ್ಥಿತಿಯಿಂದ ಮೇಲೆತ್ತಿತ್ತು. ಆದರೆ ಮಾಜಿ ವೇಗಿ ಅಜಿತ್ ಅಗರ್ಕರ್ ಮಾತ್ರ ಧೋನಿ ಇನಿಂಗ್ಸ್ ನ್ನು ಟೀಕಿಸಿದ್ದಾರೆ.
ಧೋನಿ 51 ರನ್ ಮಾಡಲು ಬರೋಬ್ಬರಿ 96 ಎಸೆತ ಎದುರಿಸಿದ್ದರು. ಅಂದರೆ ಇದು ಏಕದಿನ ಫಾರ್ಮ್ಯಾಟ್ ಗೆ ತಕ್ಕುದಾದ ಆಟವಾಗಿರಲಿಲ್ಲ. ರೋಹಿತ್ ಗೆ ಧೋನಿಯಿಂದ ಯಾವ ಸಹಾಯವೂ ಸಿಗಲಿಲ್ಲ ಎಂದು ಅಗರ್ಕರ್ ಧೋನಿಯ ನಿಧಾನಗತಿಯ ಇನಿಂಗ್ಸ್ ನ್ನು ಟೀಕಿಸಿದ್ದಾರೆ.
ಹಿಂದೆ ಧೋನಿ ಕಳಪೆ ಫಾರ್ಮ್ ಪ್ರದರ್ಶಿಸಿದ್ದಕ್ಕೆ ಅವರು ನಿವೃತ್ತಿಯಾಗಬೇಕು ಎಂದು ಒತ್ತಾಯಿಸಿ ಅಗರ್ಕರ್ ಟೀಕೆಗೊಳಗಾಗಿದ್ದರು. ಇದೀಗ ಮತ್ತೆ ಧೋನಿ ಮೇಲೆ ಟೀಕಾಸ್ತ್ರ ಹರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ