ಟೀಂ ಇಂಡಿಯಾದ ಹೊಸ ಕೋಚ್ ಅನಿಲ್ ಕುಂಬ್ಳೆ ಕುರಿತ ಸತ್ಯಾಂಶಗಳು

ಗುರುವಾರ, 23 ಜೂನ್ 2016 (18:50 IST)
ಬಿಸಿಸಿಐ ಇಂದು ಹಿರಿಯ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಭಾರತ ಕ್ರಿಕೆಟ್ ತಂಡದ ಹೊಸ ಕೋಚ್ ಹುದ್ದೆಗೆ ನೇಮಕ ಮಾಡಿದೆ.  ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ 56 ಮಂದಿ ಅರ್ಜಿದಾರರ ಪೈಕಿ ಅನಿಲ್ ಕುಂಬ್ಳೆ ಕೂಡ ಕೆಲವು ದಿನಗಳ ಬಳಿಕ ಅಖಾಡಕ್ಕೆ ಇಳಿದಿದ್ದರು. 
 
 ಬಲಗೈ ಸ್ಪಿನ್ ಬೌಲರ್ ಕುರಿತು ಕೆಲವು ಸತ್ಯಾಂಶಗಳು ಕೆಳಗಿವೆ
ಅನಿಲ್ ಕುಂಬ್ಳೆ ಅವರಿಗೆ ಪೂರ್ವಭಾವಿ ಕೋಚಿಂಗ್ ಅನುಭವ ಇಲ್ಲದಿದ್ದರೂ ಮುಂಬೈ ಇಂಡಿಯನ್ಸ್  ಮತ್ತು ರಾಯಲ್ ಚಾಲೆಂಜರ್ಸ್ ಮಾರ್ಗದರ್ಶಿಯಾಗಿ ಕೆಲಸ ಮಾಡಿದ ಅನುಭವವಿದೆ. 
 
1990ರಲ್ಲಿ ಕುಂಬ್ಳೆ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಟೆಸ್ಟ್‌ಗಳಲ್ಲಿ 639 ವಿಕೆಟ್‌ಗಳನ್ನು ಕಬಳಿಸಿದ ಕೀರ್ತಿಗೆ ಅವರು ಪಾತ್ರರಾಗಿದ್ದು,  337 ಏಕದಿನ ವಿಕೆಟ್‌ಗಳನ್ನು ಕೂಡ ಕಬಳಿಸಿದ್ದಾರೆ. ಟೆಸ್ಟ್ ಇತಿಹಾಸದಲ್ಲಿ ಮೂರನೇ ಅತ್ಯಧಿಕ ವಿಕೆಟ್ ಗಳಿಸಿದ ಹೆಗ್ಗಳಿಕೆಗೆ ಕುಂಬ್ಳೆ ಪಾತ್ರರಾಗಿದ್ದಾರೆ. 
 
ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಜಿಮ್ ಲೇಕರ್ ಬಳಿಕ ಎಲ್ಲಾ 10 ವಿಕೆಟ್ ಕಬಳಿಸಿದ ಏಕಮಾತ್ರ ಬೌಲರ್ ಕುಂಬ್ಳೆ.  ಈಗ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿ ಆಯ್ಕೆಯಾಗಿರುವುದರಿಂದ ಅವರು ಹೊಸ ಪಾತ್ರದಲ್ಲಿ ತಮ್ಮ ಹೊಳಪನ್ನು ಪ್ರಕಾಶಿಸುತ್ತಾರಾ ಕಾದು ನೋಡಬೇಕು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ