ಮುಂಬೈ: ಉತ್ತರಾಖಂಡ ಟೀಂ ಕೋಚ್ ಆಗಿದ್ದ ವಾಸಿಂ ಜಾಫರ್ ಪಕ್ಷಪಾತ ಧೋರಣೆ ವಿರೋಧಿಸಿ ತಮ್ಮ ಸ್ಥಾನಕ್ಕೆ
ರಾಜೀನಾಮೆ ನೀಡಿದ್ದರು. ಇದೀಗ ಅವರ ಬೆಂಬಲಕ್ಕೆ ಟೀಂ ಇಂಡಿಯಾ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ನಿಂತಿದ್ದಾರೆ.
ಜಾಫರ್ ಕ್ರಿಕೆಟ್ ಸಂಸ್ಥೆ ವಿರುದ್ಧ ಪಕ್ಷಪಾತದ ಆರೋಪ ಮಾಡಿದ್ದರೆ, ಅವರ ವಿರುದ್ಧ ಉತ್ತರಾಖಂಡ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಮಹಿಮ್ ವರ್ಮ, ಟೀಂ ಮ್ಯಾನೇಜರ್ ನವನೀತ್ ಮಿಶ್ರಾ ಅವರು ಒಂದು ಧರ್ಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು ಎಂದು ಪ್ರತ್ಯಾರೋಪ ಮಾಡಿದ್ದರು. ಇದಕ್ಕೆ ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದ ಜಾಫರ್, ನಾನು ಯಾವುದೇ ಮೌಲ್ವಿಯನ್ನು ತಂಡಕ್ಕೆ ಕರೆಸಿಕೊಂಡಿರಲಿಲ್ಲ. ನಾನು ನಾಯಕತ್ವಕ್ಕೆ ಜಯ್ ಬಿಷ್ತಾ ಹೆಸರು ಶಿಫಾರಸ್ಸು ಮಾಡಿದ್ದೆನೇ ಹೊರತು, ಇಕ್ಬಾಲ್ ರನ್ನಲ್ಲ. ತಂಡದಲ್ಲಿ ಸಿಖ್ ಧರ್ಮದ ಮಂತ್ರ ಜಪವಾಗುತ್ತಿತ್ತು, ನಾನು ಟೀಂ ಉತ್ತರಾಖಂಡ ಎಂದು ಸಲಹೆ ನೀಡಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅನಿಲ್ ಕುಂಬ್ಳೆ, ನೀನು ಸರಿಯಾದುದನ್ನೇ ಮಾಡಿದ್ದೀರಿ. ಆದರೆ ಆಟಗಾರರು ನಿಮ್ಮ ಕೋಚಿಂಗ್ ನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎಂದಿದ್ದಾರೆ.