ವಿರಾಟ್ ಕೊಹ್ಲಿ ಬಗ್ಗೆ ಹೀಗೆ ಹೇಳಿದ್ದಕ್ಕೆ ಅನುಷ್ಕಾ ಶರ್ಮಾಗೆ ಕೋಪ!

ಸೋಮವಾರ, 13 ಫೆಬ್ರವರಿ 2017 (12:05 IST)
ಮುಂಬೈ: ಇತ್ತೀಚೆಗಷ್ಟೇ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಅಭಿನಯಿಸಿರುವ ಫಿಲೌರಿ ಸಿನಿಮಾ ಸದ್ದು ಮಾಡುತ್ತಿದೆ. ಆದರೆ ಈ ಸಿನಿಮಾಕ್ಕೆ ದುಡ್ಡು ಹಾಕಿದ್ದು ವಿರಾಟ್ ಕೊಹ್ಲಿ ಎಂದರೆ ಬೇಸರವಾಗದೇ ಇರುತ್ತಾ?

 
ಹೌದು. ನಿಮಗೆಲ್ಲಾ ಯಾರು ಇಂತಹದ್ದೊಂದು ಸುದ್ದಿ ಕೊಡುತ್ತಾರೆ. ಸಿನಿಮಾಕ್ಕೆ ಕೊಹ್ಲಿ ಹಣ ಕೊಟ್ಟರು ಎಂದು ನನ್ನ ಕಠಿಣ ಪರಿಶ್ರಮವನ್ನು ಕಡೆಗಣಿಸಬೇಡಿ. ಪತ್ರಕರ್ತರಿಗೆ ಬರೆಯುವ ಸ್ವಾತಂತ್ರ್ಯವಿರುವುದು ನಿಜ. ಹಾಗಂತ ತೋಚಿದ ಹಾಗೆ ಬರೆಯಬೇಡಿ ಎಂದು ಸಾಮಾಜಿಕ ಜಾಲತಾಣದ ಪುಟದಲ್ಲಿ ಮಾಧ್ಯಮಗಳಿಗೆ ಜಾಡಿಸಿ ಬರೆದಿದ್ದಾರೆ ಅನುಷ್ಕಾ.

ಈಗಾಗಲೇ ಹಲವು ಬಾರಿ ಕೊಹ್ಲಿ ಮತ್ತು ಅನುಷ್ಕಾ ಬಗ್ಗೆ ಹಲವು ವಿಷಯಗಳಲ್ಲಿ ಮಾಧ್ಯಮಗಳು ಮೂರ್ಖರಾಗಿವೆ.  ಆಗಾಗ ತಮ್ಮಿಬ್ಬರ ಬಗ್ಗೆ ಬರೆಯುವ ಮಾಧ್ಯಮಗಳ ಮೇಲೆ ಇವರಿಬ್ಬರೂ ತಾರೆಗಳು ಕಿಡಿ ಕಾರುತ್ತಲೇ ಇರುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ