ಅನುಷ್ಕಾ ಕೈಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡ ವಿರಾಟ್ ಕೊಹ್ಲಿ!

ಬುಧವಾರ, 11 ನವೆಂಬರ್ 2020 (10:21 IST)
ದುಬೈ: ಐಪಿಎಲ್ ಮುಗಿಸಿ ವಿರಾಟ್ ಕೊಹ್ಲಿ ಇನ್ನೇನು ಆಸ್ಟ್ರೇಲಿಯಾ ಪ್ರವಾಸಕ್ಕೆ ಸಿದ್ದರಾಗುತ್ತಿದ್ದಾರೆ. ಇದಕ್ಕಾಗಿ ಅವರು ಭರ್ಜರಿ ತಯಾರಿಯನ್ನೇ ಮಾಡುತ್ತಿದ್ದಾರೆಂಬುದಕ್ಕೆ ಪತ್ನಿ ಅನುಷ್ಕಾ ಶರ್ಮಾ ಪ್ರಕಟಿಸಿದ ಲೇಟೆಸ್ಟ್ ಫೋಟೋವೇ ಸಾಕ್ಷಿ!


ವಿರಾಟ್ ತಮ್ಮ ಶೂಗಳ ಕೊಳೆಯನ್ನು  ಶ್ರದ್ಧೆಯಿಂದ ಶುಚಿಗೊಳಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಅನುಷ್ಕಾ ‘ಶೂ ಕೊಳೆ ತೊಳೆಯುವಾಗ ಗಂಡನನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಬಿಟ್ಟೆ’ ಎಂದು ಕಾಲೆಳೆದಿದ್ದಾರೆ. ವಿರಾಟ್ ಆಸ್ಟ್ರೇಲಿಯಾದಲ್ಲಿ ಏಕದಿನ ಮತ್ತು ಟಿ20 ಸರಣಿ ಆಡಲಿದ್ದು, ಬಳಿಕ ಅನುಷ್ಕಾ ಹೆರಿಗೆಗಾಗಿ ತವರಿಗೆ ಮರಳಲಿದ್ದಾರೆ. ಬಳಿಕ ಕೊನೆಯ ಟೆಸ್ಟ್ ವೇಳೆಗೆ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ