ಆಸ್ಟ್ರೇಲಿಯದಲ್ಲಿ ಬೀಡು ಬಿಟ್ಟಿರುವ ಅನುಷ್ಕ-ವಿರಾಟ್ ಪ್ರಣಯ ಹಕ್ಕಿಗಳು

ಶನಿವಾರ, 3 ಜನವರಿ 2015 (10:12 IST)
ಆಸ್ಟ್ರೇಲಿಯಾದಲ್ಲಿ ಅನುಷ್ಕ ಶರ್ಮ ಮತ್ತು ವಿರಾಟ್ ಕೊಹ್ಲಿ ಕೈ ಕೈ ಹಿಡಿದು ನಲಿದಾಡುತ್ತಿದ್ದಾರಂತೆ. ಹೊಸ ವರ್ಷಾಚರಣೆಯನ್ನು ವಿದೇಶದಲ್ಲಿ ಮಾಡುತ್ತಿರುವ ಈ ಜೋಡಿ ಈಗ ಎಲ್ಲೆಡೆ ತಮ್ಮ ಪ್ರೀತಿಯನ್ನು ತೋರುತ್ತಾ, ಪ್ರಣಯ ಹಕ್ಕಿಗಳು ನಾವು ಎಂದು  ಜಗತ್ತಿಗೆ ಸಾರುತ್ತಿದ್ದಾರೆ. 
ಸಿಡ್ನಿಯ ಡಾರ್ಲಿಂಗ್ ಹಾರ್ಬರ್ ನಲ್ಲಿ ಓಡಾಡುತ್ತಿರುವುದನ್ನು ಮೀಡಿಯ  ಕಣ್ಣಿಗೆ ಕಂಡಿದೆ.ಗುರುವಾರ ಈ ಜೋಡಿ ಆಸ್ಟ್ರೇಲಿಯಾದ ಹಲವಾರು ಕಡೆ ತಿರುಗಾಡಿದ್ದಾರೆ. ಕಳೆದ ಕೆಲವು ಕಾಲದಿಂದ ಈ ಜೋಡಿ ಡೇಟಿಂಗ್ ಮಾಡುತ್ತಿದ್ದಾರೆ.  
 
ಅನುಷ್ಕ ಈಗ ಪೀಕೆ ಗೆಲುವಿನ ಖುಷಿಯಲ್ಲಿ ಇದ್ದಾಳೆ. ಆಸ್ಟ್ರೇಲಿಯಾ ಟೂರ್ ನಲ್ಲಿ ಇರುವ ವಿರಾಟ್ ಸಹಿತ ಕ್ರಿಕೆಟ್ ನಲ್ಲಿ ಒಳ್ಳೆಯ ಸಾಧನೆ ತೋರುತ್ತಿದ್ದಾರೆ. ಅನುಷ್ಕ ವಿರಾಟ್ ಆಡುವುದನ್ನು ವೀಕ್ಷಿಸಲು ಬಂದಾಗ ಅಭಿಮಾನಿಗಳ ಉತ್ಸಾಹ ಎಲ್ಲೇ ಮೀರುತ್ತಿದ್ದು ಆಡುವಾಗ ವಿರಾಟ್ ತನ್ನ ಬ್ಯಾಟ್ ಮೂಲಕ ಪ್ರಿಯತಮೆಗೆ ಕಿಸ್ ನೀಡಿ ಎಲ್ಲರನ್ನು ತನ್ನತ್ತ ಸೆಳೆಯುತ್ತಿರುವುದು ಆಟದ ಮುಖ್ಯ ಆಕರ್ಷಣೆಗಳಲ್ಲಿ ಒಂದಾಗಿದೆ!!

ವೆಬ್ದುನಿಯಾವನ್ನು ಓದಿ