ಸದ್ಯದಲ್ಲೇ ಸತಿಪತಿಗಳಾಗಲಿದ್ದಾರಂತೆ ವಿರಾಟ್ ಕೊಹ್ಲಿ, ಅನುಷ್ಕಾ!

ಶುಕ್ರವಾರ, 22 ಆಗಸ್ಟ್ 2014 (09:33 IST)
ಕ್ರಿಕೆಟರ್ ಕೊಹ್ಲಿ ಮತ್ತು ನಟಿ ಅನುಷ್ಕಾ  ಲವ್ವಿ ಡವ್ವಿ ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಅವರಿಬ್ಬರಲ್ಲಿ ಪ್ರೀತಿ ಪ್ರಾರಂಭವಾದ ಮೇಲೆ ಯಾವಾಗಲೂ ಅಬ್ಬರಿಸುತ್ತಿದ್ದ ಕೊಹ್ಲಿ ಬ್ಯಾಟ ಯಾಕೋ ಮಂಕಾಗಿದೆ ಎಂಬುದು ಅವರ ಅಭಿಮಾನಿಗಳ ಚಿಂತೆ. ಯಾವಾಗಲೂ ಬ್ಯಾಟ್ ಬೀಸಿ ದಾಖಲೆ ಮಾಡುತ್ತಿದ್ದ ವಿರಾಟ್,  ಇತ್ತೀಚಿಗೆ ಮುಕ್ತಾಯಗೊಂಡ ಇಂಗ್ಲೆಂಡ್‌ ಜತೆಗಿನ ಟೆಸ್ಟ್  ಪ್ರವಾಸದಲ್ಲಿ ಬ್ಯಾಟ್ ಎತ್ತಲಾಗದೇ ಪರದಾಡಿ, 10 ಇನ್ನಿಂಗ್ಸ್‌ಗಳಲ್ಲಿ ಅತಿ ಕಡಿಮೆ ರನ್ ಪೇರಿಸಿದ ಆಟಗಾರ ಎಂಬ ಕುಖ್ಯಾತ ದಾಖಲೆಗೆ ಪಾತ್ರರಾದರು. 

ಇದಕ್ಕೆ ಅಭಿಮಾನಿಗಳು ನೀಡಿದ ಕಾರಣ ಬ್ರಿಟಿಷ್ ನಾಡಿನಲ್ಲಿ  ಕೊಹ್ಲಿ ಜತೆ ಅನುಷ್ಕಾ ಜತೆ ಹೋಗಿದ್ದು. ಅನುಷ್ಕಾ ಪ್ರೀತಿಯ ಅಲೆಯಲ್ಲಿ ವಿರಾಟನ ಭರಾಟೆ ಉಡುಗಿ ಹೋಯಿತು ಎಂದು ಮಾಧ್ಯಮಗಳು ಸೇರಿದಂತೆ ದೇಶದ ಅಭಿಮಾನಿಗಳೆಲ್ಲರೂ  ಮಾತಾಡಿಕೊಂಡರು. ಅಲ್ಲದೇ ಅವರಿಬ್ಬರನ್ನು ಜತೆಗೆ ಇರಲು ಅನುಮತಿ ನೀಡಿ ಬಿಸಿಸಿಐ ವಿರಾಟ್ ಕಳಪೆ ಆಟಕ್ಕೆ ಪರೋಕ್ಷವಾಗಿ ಕಾರಣವಾಯಿತು ಎಂದು ದೇಶದ ಮಾಧ್ಯಮಗಳು ಕುಟುಕಿದವು. 
 
ಮಾಧ್ಯಮಗಳು ಬಿಸಿಸಿಐ ಮಾಡುತ್ತಿರುವ ಆರೋಪಕ್ಕೆ  ಮ್ಯಾನೇಜ್‌ಮೆಂಟ್‌ ಮಂಡಳಿ ಬಳಿ ಸ್ಪಷ್ಟನೆ ಕೇಳಿತು. ಬೀಸುವ ದೊಣ್ಣೆಯಿಂದ  ತಪ್ಪಿಸಿಕೊಳ್ಳುವ ಅನಿವಾರ್ಯತೆಯಲ್ಲಿದ್ದ ಬಿಸಿಸಿಐ ಅವರಿಬ್ಬರು ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಅಡಿ ಇಡಲಿದ್ದಾರೆ ಎಂದು ಹೇಳಿ ಕೊಹ್ಲಿ  ಕಳಪೆ ಆಟಕ್ಕೆ ತಾನು ಕಾರಣ ಎನ್ನುವ ಆಪಾದನೆಯಿಂದ ರಕ್ಷಿಸಿಕೊಳ್ಳಲು ಹವಣಿಸುತ್ತಿದೆ.ಅಲ್ಲದೇ ಆಟಗಾರರ ಜತೆ ಈ ಮೊದಲು ಸಹ ಗೆಳತಿಯರು ಪ್ರವಾಸಕ್ಕೆ ಹೋಗಿದ್ದಾರೆ. ವಿರಾಟ್ ಕಳಪೆ ಪ್ರದರ್ಶನದ ಹಿಂದೆ  ನಟಿಯ ಪಾತ್ರವಿಲ್ಲ ಎಂದು ಭಾರತೀಯ ಕ್ರಿಕೆಟ್ ಮಂಡಳಿ ಸಮಜಾಯಿಸಿ ನೀಡಿದೆ. 
 
ಅವರಿಬ್ಬರು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಬಿಸಿಸಿಐ ಮ್ಯಾನೇಜ್‌ಮೆಂಟ್ ಬಳಿ ಹೇಳಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸತ್ಯ ಎಂದು ಕೊಹ್ಲಿ ಮತ್ತು ಅನುಷ್ಕಾರೇ ಸ್ಪಷ್ಪಪಡಿಸಬೇಕು. 

ವೆಬ್ದುನಿಯಾವನ್ನು ಓದಿ