ಮುಂಬೈ: ಕ್ರಿಕೆಟ್ ದಿಗ್ಗಜ ಈಗ ಕ್ರಿಕೆಟ್ ಆಡುತ್ತಿಲ್ಲದಿದ್ದರೂ, ಆರಾಧಕರಿಗೇನೂ ಕಮ್ಮಿಯಿಲ್ಲ. ಇಂತಿಪ್ಪ ಅಭಿಮಾನಿಗಳು, ಇಂದು ಗಮನವಿಟ್ಟು ನೋಡಬೇಕಾದ ವಿಷಯವೊಂದಿದೆ.
ಧೋನಿಯ ನಂತರ ಸಚಿನ್ ತೆಂಡುಲ್ಕರ್ ಜೀವನಾಧಾರಿತ ಸಿನಿಮಾ ‘ಸಚಿನ್ ದಿ ಬಿಲಿಯನ್ಸ್ ಡ್ರೀಮ್’ ಮೇ 26 ರಂದು ಬಿಡುಗಡೆಯಾಗುತ್ತಿರುವುದ ನಿಮಗೆಲ್ಲಾ ಗೊತ್ತೇ ಇದೆ. ಈ ಚಿತ್ರ ಹೇಗಿರಬಹುದು ಎನ್ನುವ ಕುತೂಹಲಕ್ಕೆ ಇಂದು ತೆರೆ ಬೀಳಬಹುದು.
ಅಂದರೆ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗುವುದಾಗಿ ಸಚಿನ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ. ಇಂದು ಸಂಜೆ 7 ಗಂಟೆಗೆ ಟ್ರೇಲರ್ ಹೊರಬರಲಿದೆ. ‘ನನ್ನ 22 ಯಾರ್ಡ್ ಗಳ ಯಾತ್ರೆಯ ಅನುಭವ ನೋಡಿ ಎಂದು ಸಚಿನ್ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ