ಈ ಸುದ್ದಿ ಕೇಳಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮರ್ಮಾಘಾತ!

ಶುಕ್ರವಾರ, 10 ಮಾರ್ಚ್ 2017 (13:45 IST)
ಮುಂಬೈ: ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಆಘಾತ ತರುವ ಸುದ್ದಿ ಬಂದಿದೆ. ಈಗಾಗಲೇ ಕಳೆದ ಪಂದ್ಯ ಸೋತು ಮುಂದಿನ ಪಂದ್ಯದಲ್ಲಿ ಒತ್ತಡಕ್ಕೆ ಸಿಲುಕಿರುವ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ.

 
ಅದು ಪ್ರಮುಖ ಆಲ್ ರೌಂಡರ್ ಮಿಚೆಲ್ ಸ್ಟಾರ್ಕ್ ರೂಪದಲ್ಲಿ. ಕಾಲಿನ ಮುರಿತಕ್ಕೊಳಗಾಗಿರುವ ಸ್ಟಾರ್ಕ್ ಸರಣಿಯಿಂದ ಔಟ್ ಆಗಿದ್ದಾರೆ. ಬೆಂಗಳೂರು ಪಂದ್ಯದಲ್ಲೇ ನೋವಿಗೆ ತುತ್ತಾಗಿದ್ದ ಸ್ಟಾರ್ಕ್ ಕಾಲು ಮುರಿತಕ್ಕೊಳಗಾಗಿರುವುದು ಪರೀಕ್ಷೆಯಿಂದ ತಿಳಿದು ಬಂದಿದೆ ಎಂದು ಆಸ್ಟ್ರೇಲಿಯಾ ತಂಡದ ವ್ಯವಸ್ಥಾಪಕರು ಹೇಳಿದ್ದಾರೆ.

ಪುಣೆ ಟೆಸ್ಟ್ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಟಾರ್ಕ್ ಬೆಂಗಳೂರು ಪಂದ್ಯದಲ್ಲೂ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಅವರು ಇದೀಗ ಹೊರಗುಳಿಯಬೇಕಾಗಿರುವುದು ಆಸ್ಟ್ರೇಲಿಯಾ ತಂಡಕ್ಕೆ ನಿಜಕ್ಕೂ ಹೊಡೆತ ನೀಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ