ಶಾಹಿದ್ ಆಫ್ರಿದಿ ಜೀವನಚರಿತ್ರೆ ಓದಬೇಕೇ?

ಮಂಗಳವಾರ, 18 ಅಕ್ಟೋಬರ್ 2016 (09:02 IST)
ನವದೆಹಲಿ: ಇತ್ತೀಚೆಗಷ್ಟೇ ನಿವೃತ್ತರಾದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಜೀವನ ಚರಿತ್ರೆಯನ್ನು ಸದ್ಯದಲ್ಲೇ ಓದಬಹುದು. ತಮ್ಮ ವೃತ್ತಿ ಜೀವನ, ಭಾರತದೊಂದಿಗಿನ ವೈರತ್ವ ಮತ್ತು ಬಾಂಧವ್ಯಗಳ ಕುರಿತು ಈ ಪುಸ್ತಕದಲ್ಲಿ ಹೇಳುತ್ತಾರಂತೆ.

‘ಶಾಹಿದ್ ಅಫ್ರಿದಿ: ಆನ್ ಅಟೋಬಯೋಗ್ರಫಿ’ ಪುಸ್ತಕ ಮುಂದಿನ ವರ್ಷ ಬಿಡುಗಡೆಯಾಗಲಿದ್ದು,ಪತ್ರಕರ್ತ ವಜಾಹತ್ ಎಸ್ ಖಾನ್ ನೆರವಾಗಲಿದ್ದಾರೆ. ವಿಶೇಷವೆಂದರೆ,  ಹಾರ್ಪೆ ಕಾಲಿನ್ಸ್ ಇಂಡಿಯಾ ಪುಸ್ತಕದ ಜಾಗತಿಕ ಹಕ್ಕು ಪಡೆದುಕೊಂಡಿದೆ.

ತಮ್ಮ ವೃತ್ತಿ ಬದುಕಿನಲ್ಲಿ ಹಲವು ಏಳು ಬೀಳುಗಳನ್ನು, ವಿವಾದಗಳನ್ನು ಕಂಡ ಅಫ್ರಿದಿಯ ವರ್ಣರಂಜಿತ ಬದುಕಿನ ಚಿತ್ರಣ ಇದರಲ್ಲಿ ಸಿಗಲಿದೆ. ‘ಇದುವರೆಗೆ ನಾನು ಹಲವು ಸಂದರ್ಶನಗಳನ್ನು ನೀಡಿದ್ದೆ. ಆದರೆ ಈ ಪುಸ್ತಕದಲ್ಲಿ ನಾನು ಇದವರೆಗೆ ಹೇಳಿರದ ಹಲವು ವಿಚಾರಗಳನ್ನು ಹೇಳಲಿದ್ದೇನೆ’ ಎಂದು ಅಫ್ರಿದಿ ಹೇಳಿಕೊಂಡಿದ್ದಾರೆ. ಹಾಗಾಗಿ ಈ ಪುಸ್ತಕ ಹಲವು ವಿವಾದಗಳನ್ನು ಎಬ್ಬಿಸುವ ಸೂಚನೆಯನ್ನು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ