ರೋಹಿತ್-ಕೊಹ್ಲಿ ವಿವಾದಕ್ಕೆ ಮಧ್ಯಸ್ಥಿಕೆ ವಹಿಸಿದ ಬಿಸಿಸಿಐ: ರಾತ್ರೋರಾತ್ರಿ ಕಾನ್ಫರೆನ್ಸ್ ಕಾಲ್!

ಸೋಮವಾರ, 30 ನವೆಂಬರ್ 2020 (10:33 IST)
ಮುಂಬೈ: ಟೀಂ ಇಂಡಿಯಾದೊಳಗೆ ಎಲ್ಲವೂ ಸರಿಯಿಲ್ಲ ಎನ್ನುವುದು ಇತ್ತೀಚೆಗೆ ರೋಹಿತ್ ಶರ್ಮಾ ಗಾಯದ ನಾಟಕದಿಂದ ಸಾಬೀತಾಗಿದೆ.


ರೋಹಿತ್ ಶರ್ಮಾ ಗಾಯದ ಕುರಿತಾಗಿ ತನಗೆ ಮಾಹಿತಿಯಿಲ್ಲ ಎಂದು ಕೊಹ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದರಿಂದ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಜಗಜ್ಜಾಹೀರಾಗಿತ್ತು. ಈ ವಿವಾದ ಜೋರಾಗುತ್ತಿದ್ದಂತೇ ಬಿಸಿಸಿಐ ಮಧ್ಯ ಪ್ರವೇಶಿಸಿದೆ. ರಾತ್ರೋರಾತ್ರಿ ರೋಹಿತ್, ಕೊಹ್ಲಿ, ಕೋಚ್ ರವಿಶಾಸ್ತ್ರಿ ಒಳಗೊಂಡಂತೆ ಕಾನ್ಫರೆನ್ಸ್ ಕಾಲ್ ಆಯೋಜಿಸಿದ ಬಿಸಿಸಿಐ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದೆ. ಈ ವೇಳೆ ರೋಹಿತ್ ಗಾಯದ ಬಗ್ಗೆ ಕೋಚ್-ನಾಯಕನಿಗೆ ಮಾಹಿತಿ ನೀಡಲಾಗಿದೆ ಎನ್ನಲಾಗಿದೆ. ಅಲ್ಲದೆ, ರೋಹಿತ್ ಗೆ ಡಿಸೆಂಬರ್ 11 ಕ್ಕೆ ಫಿಟ್ನೆಸ್ ಸಾಬೀತುಪಡಿಸಲು ಸೂಚಿಸಲಾಗಿದೆ. ಆ ದಿನ ಅವರು ಫಿಟ್ನೆಸ್ ಸಾಬೀತುಪಡಿಸಿದೆ ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ ಎಂಬ ಮಾಹಿತಿ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ