ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ನಡುವೆ ಮಾತುಕತೆಯೇ ಇಲ್ಲ?!

ಭಾನುವಾರ, 29 ನವೆಂಬರ್ 2020 (08:32 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಮಾತುಕತೆಯೇ ಇಲ್ಲ? ಇಂತಹದ್ದೊಂದು ಅನುಮಾನಕ್ಕೆ ಪುಷ್ಠಿ ನೀಡುವ ಹಲವು ಅಂಶಗಳನ್ನು ನಾವು ನೋಡಬಹುದು.


ವಿರಾಟ್ ಕೊಹ್ಲಿ ರೋಹಿತ್ ಆರೋಗ್ಯದ ಬಗ್ಗೆ ತನಗೆ ಮಾಹಿತಿಯೇ ಇಲ್ಲ ಎಂದಿದ್ದಾರೆ. ಅಂದರೆ ನಾಯಕನಾಗಿ ಕೊಹ್ಲಿ ರೋಹಿತ್ ಜತೆ ನೇರವಾಗಿ ಮಾತುಕತೆಯೇ ನಡೆಸಿಲ್ಲ ಎಂದರ್ಥ. ಎಲ್ಲದಕ್ಕೂ ಕೊಹ್ಲಿ ಬಿಸಿಸಿಐ ಹೇಳಿಕೆಯನ್ನೇ ಅವಲಂಬಿಸಿದ್ದಾರೆ. ಅಂದರೆ 10 ವರ್ಷದಿಂದ ಜತೆಯಾಗಿ ಆಡುತ್ತಿರುವ ತಂಡದ ಹಿರಿಯ ಮತ್ತು ಪ್ರಮುಖ ಆಟಗಾರನ ಬಗ್ಗೆ ಇಷ್ಟು ದಿನದಲ್ಲಿ ಒಮ್ಮೆಯೂ ಕೊಹ್ಲಿ ನೇರವಾಗಿ ವಿಚಾರಿಸಿಯೇ ಇಲ್ಲ ಎಂದರೆ ಇದರ ಅರ್ಥವೇನು? ಒಂದೇ ಒಂದು ಮೆಸೇಜ್ ರವಾನಿಸಿ ತನ್ನ ಆಟಗಾರನ ಯೋಗ ಕ್ಷೇಮ ವಿಚಾರಿಸಬಹುದಿತ್ತಲ್ಲವೇ?

ಅಂದು ಗಾಯದ ಸಮಸ್ಯೆಯಿಂದ ರೋಹಿತ್ ರನ್ನು ಆಸ್ಟ್ರೇಲಿಯಾ ತಂಡದಿಂದ ಹೊರಗಿಟ್ಟ ಎರಡೇ ಗಂಟೆಗಳಲ್ಲಿ ಮುಂಬೈ ಇಂಡಿಯನ್ಸ್ ಬೇಕೆಂದೇ ರೋಹಿತ್ ನೆಟ್ ಪ್ರಾಕ್ಟೀಸ್ ಮಾಡುವ ವಿಡಿಯೋಗಳನ್ನು ಪ್ರಕಟಿಸಿ ಬಿಸಿಸಿಐಗೆ ಟಾಂಗ್ ಕೊಟ್ಟಿತ್ತು. ಹಾಗಿದ್ದರೆ ಬಿಸಿಸಿಐ ಕೂಡಾ ರೋಹಿತ್ ಸ್ಥಿತಿಯ ಬಗ್ಗೆ ಸರಿಯಾಗಿ ವಿಚಾರಿಸಿಲ್ಲವೇ? ಕೊಹ್ಲಿ ಪಿತೃತ್ವ ರಜೆ ಕಾರಣದಿಂದ ಮೂರು ಟೆಸ್ಟ್ ಪಂದ್ಯಗಳಿಂದ ವಿನಾಯ್ತಿ ಪಡೆದ ಬೆನ್ನಲ್ಲೇ ರೋಹಿತ್ ರನ್ನು ಟೆಸ್ಟ್ ಸರಣಿಗೆ ಆಯ್ಕೆ ಮಾಡಲು ಬಿಸಿಸಿಐ ಪ್ರಯತ್ನ ನಡೆಸಿತು. ಐಪಿಎಲ್ ಪಂದ್ಯವಾಡಿದ ರೋಹಿತ್ ಗೆ ಯಾವುದೇ ಸಮಸ್ಯೆಯಾಗಿಲ್ಲವೆಂದರೆ ಟೀಂ ಇಂಡಿಯಾ ಪರ ಟಿ20 ಸರಣಿಯಲ್ಲಿ ಆಡಲು ಏನು ಗಾಯದ ಸಮಸ್ಯೆ ಕಾಡುತ್ತಿದೆ?  ಕೊಹ್ಲಿ-ರೋಹಿತ್ ನಡುವಿನ ಗುದ್ದಾಟದ ಕಾರಣದಿಂದಾಗಿಯೇ ರೋಹಿತ್ ರನ್ನು ತಂಡದಿಂದ ಕೈಬಿಡಲಾಯಿತೇ ಎಂಬ ಅನುಮಾನಗಳು ಈಗ ಬಲವಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ