ಚಾರ್ಜ್ ಶೀಟ್ ಬರುವವರೆಗೂ ಮೊಹಮ್ಮದ್ ಶಮಿ ಮೇಲೆ ಕ್ರಮವಿಲ್ಲ ಎಂದ ಬಿಸಿಸಿಐ
ಶಮಿ ವಿರುದ್ಧದ ಚಾರ್ಜ್ ಶೀಟ್ ಬರುವವರೆಗೂ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲ್ಲ. ಈಗಲೇ ನಿರ್ಧಾರಕ್ಕೆ ಬರುವುದು ಆತುರ ಮಾಡಿದಂತಾಗುತ್ತದೆ. ವೇಗಿ ವಿರುದ್ಧ ದಾಖಲಾದ ಆರೋಪಗಳು ನಿಜವೇ ಎಂದು ಸ್ಪಷ್ಟವಾಗಬೇಕಿದೆ. ಬಳಿಕವೇ ಶಿಸ್ತು ಕ್ರಮದ ಬಗ್ಗೆ ಚಿಂತಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.