ನಾಯಕನಾಗಿ ವಿರಾಟ್ ಕೊಹ್ಲಿ ಈಗ ಟೀಂ ಇಂಡಿಯಾ ನಾಯಕರಿಗೇ ನಂ.1

ಮಂಗಳವಾರ, 3 ಸೆಪ್ಟಂಬರ್ 2019 (09:31 IST)
ಜಮೈಕಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆಲ್ಲುವುದರೊಂದಿಗೆ ವಿರಾಟ್ ಕೊಹ್ಲಿ ಪಡೆ ಸರಣಿ ಕೈವಶ ಮಾಡಿಕೊಂಡಿದೆ.


ವಿರಾಟ್ ಕೊಹ್ಲಿ ಈ ಮೂಲಕ ಟೀಂ ಇಂಡಿಯಾ ನಾಯಕನಾಗಿ ಭಾರತದ ಪರ ಅತ್ಯಂತ ಹೆಚ್ಚು ಟೆಸ್ಟ್ ಗೆಲುವು ಪಡೆದ ಧೋನಿ ದಾಖಲೆಯನ್ನು ಮುರಿದು ನಂ.1 ನಾಯಕರಾಗಿದ್ದಾರೆ. 48 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿ ಕೊಹ್ಲಿಗೆ ಇದು 28 ನೇ ಗೆಲುವಾಗಿತ್ತು.

ಈ ಮೂಲಕ ಧೋನಿ ನಂ.2 ಸ್ಥಾನಕ್ಕೆ ಜಾರಿದ್ದಾರೆ. ವಿಶೇಷವೆಂದರೆ ವಿಂಡೀಸ್ ವಿರುದ್ಧವೇ ಕೊಹ್ಲಿ ಟೆಸ್ಟ್ ಗೆ ಪದಾರ್ಪಣೆ ಮಾಡಿದ್ದರು. ಅದೇ ತಂಡದ ವಿರುದ್ಧವೇ ಮೊದಲ ಟೆಸ್ಟ್ ದ್ವಿಶತಕ ದಾಖಲಿಸಿದ್ದರು. ಇದೀಗ ಅದೇ ತಂಡದ ವಿರುದ್ಧವೇ ಯಶಸ್ವೀ ನಾಯಕನೆಂಬ ದಾಖಲೆಯನ್ನೂ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ