ಐಸಿಸಿ ಟೆಸ್ಟ್ ತಂಡದಿಂದ ವಿರಾಟ್ ಕೊಹ್ಲಿ ಔಟಾಗಿದ್ದಕ್ಕೆ ಬಿಸಿಸಿಐ ಅಧ್ಯಕ್ಷರ ಬಳಿಯಿದೆ ಕಾರಣ
ಶುಕ್ರವಾರ, 23 ಡಿಸೆಂಬರ್ 2016 (05:12 IST)
ಮುಂಬೈ: ಐಸಿಸಿ ಬಿಡುಗಡೆಗೊಳಿಸಿದ ವಿಶ್ವ ಟೆಸ್ಟ್ ತಂಡದಿಂದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಹೊರಗಿಟ್ಟಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಟ್ವಿಟರ್ ನಲ್ಲಂತೂ ಐಸಿಸಿಯನ್ನು ಹಿಗ್ಗಾ ಮುಗ್ಗಾ ಬೈಯುವವರೇ. ಹಾಗಿದ್ದರೆ ಕೊಹ್ಲಿ ಔಟಾಗಲು ನಿಜವಾದ ಕಾರಣವೇನು?
ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅದಕ್ಕೆ ಸೂಕ್ತ ಕಾರಣ ನೀಡಿದ್ದಾರೆ. ಐಸಿಸಿ ಟೆಸ್ಟ್ ತಂಡ ಆಯ್ಕೆಗೆ ಸೆಪ್ಟೆಂಬರ್ ತಿಂಗಳಿನ ಮೊದಲೇ ವೋಟಿಂಗ್ ನಡೆದಿತ್ತು. ತಂಡವನ್ನು ಅನೌನ್ಸ್ ಮಾಡಿದ್ದು ಮಾತ್ರ ಈಗ. ಕೊಹ್ಲಿ ರನ್ ಗಳಿಸಿದ್ದು, ಸೆಪ್ಟೆಂಬರ್ ನಿಂದ ನಂತರದ ಸರಣಿಗಳಲ್ಲಿ. ಹೀಗಾಗಿ ಕೊಹ್ಲಿಯನ್ನು ಐಸಿಸಿ ಪರಿಗಣಿಸಿಲ್ಲ ಎಂದು ಅನುರಾಗ್ ಠಾಕೂರ್ ಸಮಜಾಯಿಷಿ ನೀಡಿದ್ದಾರೆ.
ಇದೇ ವೇಳೆ ಇಂಗ್ಲೆಂಡ್ ನಾಯಕ ಅಲೆಸ್ಟರ್ ಕುಕ್ ಕಳೆದ ಸೆಪ್ಟೆಂಬರ್ ನಿಂದ ಈ ವರ್ಷ ಸೆಪ್ಟೆಂಬರ್ ತಿಂಗಳಿನ ಅವಧಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸಹಜವಾಗಿ ಸದ್ಯ ಸೋಲಿನ ಸುಳಿಗೆ ಸಿಲುಕಿರುವ ಕುಕ್ ಟೆಸ್ಟ್ ತಂಡಕ್ಕೆ ನಾಯಕರಾಗಿದ್ದಾರೆ. ಇದು ಐಸಿಸಿ ಲೆಕ್ಕಾಚಾರ. ಬಹುಶಃ ಮುಂದಿನ ವರ್ಷ ಕೊಹ್ಲಿ ಟೆಸ್ಟ್ ತಂಡಕ್ಕೆ ನಾಯಕರೇ ಆಗಬಹುದು. ಬಲ್ಲವರಾರು?
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ