ಗೆಳತಿಯರ ಜೊತೆ ಬಿಂದಾಸ್ ಪಾರ್ಟಿ, ಕೈಯಲ್ಲಿ ಸಿಗರೇಟು: ಧೋನಿ ಪತ್ನಿ ಸಾಕ್ಷಿಯದ್ದು ಇದೇನು ಅವತಾರ

Sampriya

ಮಂಗಳವಾರ, 3 ಸೆಪ್ಟಂಬರ್ 2024 (15:33 IST)
Photo Courtesy X
ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಕ್ರಿಕೆಟರ್ ಎಂಎಸ್ ಧೋನಿ ಪತ್ನಿ ಸಾಕ್ಷಿ ಇದೀಗ ಸುದ್ದಿಯಲ್ಲಿದ್ದಾರೆ. ಹೌದು ಸ್ನೇಹಿತರೊಂದಿಗೆ  ವಿದೇಶಕ್ಕೆ  ಎಂಜಾಯ್ ಮಾಡಲು ಹೋಗಿದ್ದ ಸಾಕ್ಷಿ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

Photo Courtesy X
ವೈರಲ್ ಆಗುತ್ತಿರುವ ಚಿತ್ರದಲ್ಲಿ ಸಾಕ್ಷಿ ಸಿಗರೇಟ್ ಸೇವಿಸುತ್ತಿರುವುದನ್ನು ನೋಡಬಹುದು. ಆದರೆ ಈ ಫೋಟೋ ಎಷ್ಟರಮಟ್ಟಿಗೆ ಸತ್ಯ ಅನ್ನುವುದು ಗೊತ್ತಿಲ್ಲ. ಇನ್ನೂ ಫೋಟೋ ನೋಡಿದ ನೋಡಿದ ನೆಟ್ಟಿಗರು ನಾನಾ ಪ್ರಶ್ನೆಗಳನ್ನು ಆಕೆಯ ಮುಂದಿಟ್ಟಿದ್ದಾರೆ.  ಇನ್ನೂ ಸಾಕ್ಷಿ ಅವರ ಹೆಸರು ಧೂಮಪಾನದ ಜೊತೆಗೆ ತಳುಕು ಹಾಕಿಕೊಂಡಿರುವುದು ಇದೇ ಮೊದಲಲ್ಲ.

ಆಕೆಯ ಕಾಲೇಜು ದಿನಗಳ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತ್ತು, ಅದು ಮತ್ತೆ ಧೂಮಪಾನಕ್ಕೆ ಸಂಬಂಧಿಸಿದೆ.

Photo Courtesy X
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಅವರು  ಐಪಿಎಲ್ 2024 ರ ಮೊದಲು ರುತುರಾಜ್ ಗಾಯಕ್ವಾಡ್ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸಲು ನಿರ್ಧರಿಸಿದರು ಮತ್ತು ಅವರು 2025 ರಲ್ಲಿ ಮತ್ತೊಮ್ಮೆ ಹಳದಿ ಬಣ್ಣವನ್ನು ಧರಿಸಲು ಹಿಂತಿರುಗುತ್ತಾರೆಯೇ ಎಂದು ನೋಡಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ