ನವದೆಹಲಿ: ಶನಿವಾರ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯಾಟಕ್ಕೂ ಮುನ್ನಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರು ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿರುವ ಗೌತಮ್ ಗಮಭೀರ್ ಅವರಿಗೆ ವಿಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ಇದನ್ನು ನೋಡಿದ ಗೌತಮ್ ಗಂಭೀರ್ ಭಾವುಕರಾಗಿದ್ದಾರೆ.
ಬಿಸಿಸಿಐ ಬಿಡುಗಡೆ ಮಾಡಿರುವ ವೀಡಿಯೋದಲ್ಲಿ ರಾಹುಲ್ ದ್ರಾವಿಡ್ ಅವರು ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗೌತಮ್ ಗಂಭೀರ್ ಅವರಿಗೆ ಬುದ್ದಿವಂತಿಕೆಯ ಮಾತುಗಳನ್ನು ಹೇಳಿದ್ದಾರೆ.
ದ್ರಾವಿಡ್ ಅವರು ತಮ್ಮ ಉತ್ತರಾಧಿಕಾರಿಗೆ ಕೊನೆಯ ಸಲಹೆಯನ್ನು ನೀಡಿದರು, ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ನಗೆ ಬೀರಿ. ಒಬ್ಬ ಇಂಡಿಯನ್ ಕ್ರಿಕೆಟ್ ಕೋಚ್‌ನಿಂದ ಇನ್ನೊಬ್ಬರಿಗೆ, ಕೊನೆಯ ವಿಷಯ. ಅತ್ಯಂತ ಬಿಸಿಯಾದ ಸಮಯದಲ್ಲಿ, ಉಸಿರನ್ನು ಬಿಡಿ, ಒಂದು ಹೆಜ್ಜೆ ಹಿಂದಕ್ಕೆ ಇರಿಸಿ, ಮತ್ತು ನಿಮಗೆ ಕಷ್ಟವಾದರೂ ನಗುವನ್ನು ಚಿಮ್ಮಿ. ಅದು ಜನರನ್ನು ಬೆಚ್ಚಿಬೀಳಿಸುತ್ತದೆ. ನಾನು ನಿಮಗೆ ಶುಭ ಹಾರೈಸುತ್ತೇನೆ, ಗೌತಮ್, ಮತ್ತು ನೀವು ಭಾರತ ತಂಡವನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದಾರೆ.
2021ರಿಂದ 2024ರ ಟಿ20 ವಿಶ್ವಕಪ್ ವರೆಗೆ ದ್ರಾವಿಡ್ ಭಾರತೀಯ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ಮುನ್ನಡೆಸಿದ್ದರು.