ರಾಷ್ಟ್ರೀಯ ತಂಡಕ್ಕೆ ಕಮ್ ಬ್ಯಾಕ್ ಮಾಡುತ್ತಾ ಹರ್ ಹುಲಿ

ಸೋಮವಾರ, 12 ಸೆಪ್ಟಂಬರ್ 2016 (10:23 IST)
ಕಿವೀಸ್ ವಿರುದ್ಧದ ಟೆಸ್ಟ್ ಸರಣಿಗೆ ಇಂದು ಬಿಸಿಸಿಐ ಭಾರತ ತಂಡವನ್ನು ಆಯ್ಕೆ ಮಾಡಲಿದ್ದು ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ತಂಡಕ್ಕೆ ಮರಳುವ ಸಾಧ್ಯತೆಗಳಿವೆ. 
 
ಭಾರತ ಕಂಡ ಅತ್ಯದ್ಭುತ ಆರಂಭಿಕ ಬ್ಯಾಟ್ಸ‌ಮನ್‌ಗಳಲ್ಲಿ ಒಬ್ಬರಾಗಿರುವ ಗಂಭೀರ್ ಕಳೆದೆರಡು ವರ್ಷಗಳಿಂದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಆದರೆ ಈ ವರ್ಷ ನಡೆದ ಐಪಿಎಲ್ 9ನೇ ಸೀಜನ್ ಮತ್ತು ದುಲೀಪ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವ ಗೌತಿಗೆ ತಂಡದಲ್ಲಿ ಮರಳಿ ಸ್ಥಾನ ನೀಡುವ ಕುರಿತು ಬಿಸಿಸಿಐ ಚಿಂತನೆ ನಡೆಸುತ್ತಿದೆ. 
 
ಕಳೆದೆರಡು ವರ್ಷಗಳಿಂದ ಟೀಮ್ ಇಂಡಿಯಾಕ್ಕೆ ಮರಳಲು ಒದ್ದಾಡುತ್ತಿದ್ದ ಹಳೆ ಹುಲಿ ಕಮ್ ಬ್ಯಾಕ್ ಮಾಡಲಿದೆ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿದೆ.
 
ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಬ್ಯ್ಲೂ ತಂಡದ ಸಾರಥ್ಯ ವಹಿಸಿದ್ದ ಅವರು 3 ಪಂದ್ಯಗಳಿಂದ 320 ರನ್ ಕಲೆ ಹಾಕಿದ್ದಾರೆ. ಅದರಲ್ಲಿ 4 ಭರ್ಜರಿ ಅರ್ಧ ಶತಕಗಳು ಕೂಡ ಸೇರಿವೆ. ಐಪಿಎಲ್‌ಲ್ಲೂ ಕೆಕೆಆರ್ ಪರ ಬೊಂಬಾಟ್ ಆಡವಾಡಿದ್ದ ಅವರು ಐಪಿಎಲ್ ಟಾಪ್ 5 ಬ್ಯಾಟ್ಸ್‌ಮನ್ ಪಟ್ಟಿಯಲ್ಲಿದ್ದು 4 ನೇ ಸ್ಥಾನಗಳಿಸಿದ್ದಾರೆ. 
 
ಅಷ್ಟೇ ಅಲ್ಲದೇ ಕಿವೀಸ್ ವಿರುದ್ಧ ಘರ್ಜಿಸಿದ ಹೆಗ್ಗಳಿಕೆಯೂ ಗೌತಿಗಿದೆ. ನ್ಯೂಜಿಲೆಂಡ್ ವಿರುದ್ಧ ವೈಟ್ ಜರ್ಸಿಯಲ್ಲಿ ಸಾಲಿಡ್   ಆಟವಾಡಿರುವ ಅವರು 8 ಮ್ಯಾಚ್‌ಗಳಲ್ಲಿ 670 ರನ್ ದಾಖಲಿಸಿದ್ದಾರೆ. ಅದರಲ್ಲಿ 2 ಶತಕ, ಮೂರು ಅರ್ಧ ಶತಕಗಳು ಇವೆ. 
 
ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಸಂದೀಪ್ ಪಾಟೀಲ್ ಪಡೆ ಗಂಭೀರ್ ಅವರಿಗೆ ಮಣೆ ಹಾಕುತ್ತಾ ಕಾದು ನೋಡಬೇಕಿದೆ. 
 
ಗಂಭೀರ್ ಅವರು ಉತ್ತಮ ಪ್ರದರ್ಶನ ತೋರುತ್ತಿದ್ದು ತಂಡಕ್ಕೆ ಮರಳಿ ಸೇರಿಸಿಕೊಳ್ಳಿ ಎಂದು ಅವರ ಅಭಿಮಾನಿಗಳು ಸಹ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ