ಸಚಿನ್ ತೆಂಡುಲ್ಕರ್ ಅಪಹರಣಕ್ಕೆ ಬ್ರಿಟನ್ ಮಾಜಿ ಪ್ರಧಾನಿ ಸಂಚು!

ಶನಿವಾರ, 3 ಡಿಸೆಂಬರ್ 2016 (14:51 IST)
ಮುಂಬೈ: ಕ್ರಿಕೆಟ್ ಮಾಂತ್ರಿಕ ಸಚಿನ್ ತೆಂಡುಲ್ಕರ್ ಎಂದರೆ ಸೆಲೆಬ್ರಿಟಿಗಳು ಕೂಡಾ ಹುಚ್ಚು ಅಭಿಮಾನ ತೋರಿಸುತ್ತಾರೆ. ಆದರೆ ಬ್ರಿಟನ್ ನ ಮಾಜಿ ಪ್ರಧಾನಿ ಡೇವಿಡ್ ಕೆಮರೂನ್ ಸಚಿನ್ ರನ್ನು ಅಪಹರಿಸುವ ಐಡಿಯಾ ಮಾಡಿದ್ದಾರೆ!

ಆತಂಕಪಡಬೇಡಿ. ಡೇವಿಡ್ ಹೇಳಿದ್ದು ತಮಾಷೆಗಾಗಿ. ಬ್ರಿಟನ್ ಮಾಜಿ ಪ್ರಧಾನಿಗೆ ಸಚಿನ್ ತೆಂಡುಲ್ಕರ್ ರನ್ನು ಅಪಹರಿಸಿ ಇಂಗ್ಲೆಂಡ್ ಕ್ರಿಕೆಟಿಗರಿಗೆ ತರಬೇತುದಾರನಾಗಿ ನಿಯೋಜಿಸುವ ಆಸೆ ಇದೆಯಂತೆ. ಹಾಗಂತ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಚಿನ್ ತೆಂಡುಲ್ಕರ್ ಕೂಡಾ ಪಾಲ್ಗೊಂಡಿದ್ದರು.

“ಪ್ರಸಕ್ತ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ  ಇಂಗ್ಲೆಂಡ್ ಸ್ಥಿತಿ ನೋಡಿದರೆ ನಮ್ಮ ತಂಡವನ್ನು ತರಬೇತುಗೊಳಿಸಲು ಸಚಿನ್ ರನ್ನು ಕಿಡ್ನಾಪ್ ಮಾಡಬೇಕು” ಎಂದು ಅವರು ಹಾಸ್ಯ ಮಾಡಿದ್ದಾರೆ. ಹಾಗಾಗಿ ಈ ಮಾತನ್ನು ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳಬೇಕಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ