ಅಪ್ಪನಿಗಿಂತ ದೇಶವೇ ಮುಖ್ಯವೆಂದಿದ್ದ ಕ್ರಿಕೆಟಿಗ ಮೊಹಮ್ಮದ್ ಶಮಿ!

ಶನಿವಾರ, 28 ಜನವರಿ 2017 (10:08 IST)
ನವದೆಹಲಿ: ಮೊಹಮ್ಮದ್ ಶಮಿ ತಮ್ಮ ಅಪ್ಪನನ್ನು ಕಳೆದುಕೊಂಡ ದುಃಖದಲ್ಲಿದ್ದಾರೆ. ಆದರೆ ಶಮಿ ತಮ್ಮ ಅಪ್ಪ ಹಾಸಿಗೆ ಹಿಡಿದಿದ್ದಾಗಲೂ ದೇಶ ಸೇವೆಗೆ ಹೇಗೆ ಸಿದ್ಧರಾದರು ಎಂಬುದನ್ನು ಅವರ ಸಹೋದರ ಬಿಚ್ಚಿಟ್ಟಿದ್ದಾರೆ.
 

ಅಪ್ಪನ ಆರೋಗ್ಯ ತೀರಾ ಹದಗೆಟ್ಟಿತು. ಅವರನ್ನು ದೆಹಲಿಯ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದೆವು. ಆದರೆ ಶಮಿ ಆಗಲೂ ಮುಂದಿನ ಪುನಶ್ಚೇತನ ಕಾರ್ಯಕ್ಕೆ ಬೆಂಗಳೂರಿಗೆ ಹೊರಟು ನಿಂತಿದ್ದರು. ಅವರಿಗೆ ಮುಂಬರುವ ಆಸ್ಟ್ರೇಲಿಯಾ ಪ್ರವಾಸಕ್ಕಾಗುವಾಗ ಟೀಂ ಇಂಡಿಯಾಕ್ಕೆ ಲಭ್ಯರಿರುವುದು ಮುಖ್ಯವಾಗಿತ್ತು.

ನಾವೆಲ್ಲಾ ನಿಲ್ಲು ಎಂದರೂ ಕೇಳದ ಶಮಿ ಭಾರತ ನನಗೆ ಅಪ್ಪನಿಗಿಂತಲೂ ದೊಡ್ಡದು ಎಂದು ಉತ್ತರಿಸಿದ್ದ. ಅಪ್ಪನಿಗೂ ಅದೇ ಬೇಕಾಗಿತ್ತು. ಶಮಿ ಭಾರತಕ್ಕಾಗಿ ಆಡುವುದನ್ನು ಅವರು ಯಾವತ್ತೂ ಬೆಂಬಲಿಸುತ್ತಿದ್ದರು. ಕ್ರಿಕೆಟ್ ಆತನ ರಕ್ತದಲ್ಲೇ ಇತ್ತು. ಹಾಗಾಗಿ ಮತ್ತೆ ತರಬೇತಿ ತೆರಳುವುದಕ್ಕೆ ಅಪ್ಪನೂ ಒಪ್ಪಿಗೆ ನೀಡಿದ್ದರು. ನಾವೆಲ್ಲಾ ಅಣ್ಣನ ನಿರ್ಧಾರವನ್ನು ಒಪ್ಪುತ್ತೇವೆ. ಆತನಿಗೆ ಕ್ರಿಕೆಟೇ ಎಲ್ಲಾ ಎಂದು ಶಮಿ ಸಹೋದರ ಆಸಿಫ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ