ಬಾಲ್ಯದಲ್ಲಿ ದುಂಡಗಿದ್ದು, ಆಹಾರ ಮುಕ್ಕುತ್ತಿದ್ದ ಕೊಹ್ಲಿ ಈಗ ಫಿಟ್ ಕ್ರಿಕೆಟರ್

ಗುರುವಾರ, 21 ಜುಲೈ 2016 (10:45 IST)
ವಿರಾಟ್ ಕೊಹ್ಲಿ ಜಗತ್ತಿನಲ್ಲಿ ಅತೀ ಫಿಟ್ ಆಗಿರುವ ಕ್ರಿಕೆಟರ್ ಎಂಬುದರಲ್ಲಿ ಎರಡುಮಾತಿಲ್ಲ. ಆದರೆ ಭಾರತದ ಟೆಸ್ಟ್ ನಾಯಕನ ಬಾಲ್ಯದ ದಿನಗಳಲ್ಲಿ ಕಥೆ ಭಿನ್ನವಾಗಿತ್ತು.
 
 ದುಂಡಗೆ, ದಪ್ಪಗಿದ್ದ ಬಾಲಕ ಭಾರತವನ್ನು ಅಂಡರ್ 19 ವಿಶ್ವಕಪ್ ವಿಜಯದತ್ತ ನಡೆಸಿ, 2009ರಲ್ಲಿ ಶ್ರೀಲಂಕಾ ವಿರುದ್ಧ ಭವ್ಯ ಶತಕವನ್ನು ಗಳಿಸಿ ಹಿರಿಯರ ತಂಡದಲ್ಲಿ ತಮ್ಮನ್ನು ಗುರುತಿಸಿಕೊಂಡರು. ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ನಾಯಕ ಚೇಸ್ ಸ್ಪೆಷಲಿಸ್ಟ್ ಎಂದೇ ಪ್ರಖ್ಯಾತರಾಗಿದ್ದು, ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಶ್ರೇಷ್ಟ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದರು.  27ನೇ ವಯಸ್ಸಿನಲ್ಲಿ ಕೊಹ್ಲಿ 36 ಶತಕಗಳನ್ನು ಈಗಾಗಲೇ ಗಳಿಸಿದ್ದು, ಕೆಲವು ದಾಖಲೆಗಳನ್ನು ನುಚ್ಚುನೂರು ಮಾಡಿದ್ದಾರೆ. ಇದಿಷ್ಟೇ ಅಲ್ಲದೇ ಕ್ರಿಕೆಟ್‌ನಲ್ಲಿ ಅತೀ ಫಿಟ್ ಆಗಿರುವ ಅಥ್ಲೀಟ್ ಕೂಡ ಆಗಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಅವರು ಫಿಟ್ನೆಸ್ ಕುರಿತು ವಿಶೇಷವಾಗಿ ಬಲವರ್ದನೆ ಕುರಿತು ಕಠಿಣ ಅಭ್ಯಾಸ ಮಾಡಿದ್ದು ಅದರ ಫಲಿತಾಂಶ ಈಗ ಕಂಡುಬರುತ್ತಿದೆ. ಕೊಹ್ಲಿ ತಮ್ಮ ಪೌಷ್ಠಿಕಾಂಶ ಯೋಜನೆಗಳಲ್ಲಿ ಮತ್ತು ಶಿಸ್ತಿನ ಅಂಶಗಳಲ್ಲಿ ಶ್ರೇಷ್ಟರಾಗಿದ್ದಾರೆಂದು ಟೀಂ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಫಿಟ್ನೆಸ್ ಕೋಚ್ ಶಂಕರ್ ಬಸು ಹೇಳಿದ್ದಾರೆ.
 
 ಆದರೆ ಕೊಹ್ಲಿ ಬಾಲಕನಾಗಿದ್ದಾಗ ಕಥೆ ಬೇರೆ ತೆರನಾಗಿತ್ತು. ಬಾಲಕನಾಗಿದ್ದಾಗ ಅವರ ಮುಂದೆ ಇರಿಸಿದ್ದ ಯಾವುದೇ ಆಹಾರವನ್ನು ಗಬಗಬನೆ ಮುಕ್ಕುವ ಅಭ್ಯಾಸವನ್ನು ಕೊಹ್ಲಿ ಹೊಂದಿದ್ದರು.ತಮ್ಮ ಬಾಲ್ಯದ ನೆನಪುಗಳನ್ನು ಮೆಲಕುಹಾಕುತ್ತಾ ಕೊಹ್ಲಿ  ಮೇಲಿನ ಚಿತ್ರ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ