ಧೋನಿ ಹುಟ್ಟುಹಬ್ಬಕ್ಕೆ ''ನ್ಯಾಷನಲ್ ಹೆಲಿಕಾಪ್ಟರ್ ಡೇ'' ಎಂದು ಸೆಹ್ವಾಗ್ ಟ್ವೀಟ್

ಗುರುವಾರ, 7 ಜುಲೈ 2016 (15:13 IST)
ಟೆಸ್ಟ್ ಕ್ರಿಕೆಟ್‌ನ ಓಪನಿಂಗ್ ಬ್ಯಾಟಿಂಗ‌‌ನಲ್ಲಿ ಕ್ರಾಂತಿ ಉಂಟುಮಾಡಿದ ವೀರೇಂದ್ರ ಸೆಹ್ವಾಗ್ ಇಂದಿನ ದಿನಗಳಲ್ಲಿ ಮೋಜಿನ ಟ್ವೀಟ್‌ ಮಾಡುವುದಕ್ಕೆ ಹೆಸರಾಗಿದ್ದಾರೆ.  ಧೋನಿಯ ಹುಟ್ಟುಹಬ್ಬವನ್ನು ರಾಷ್ಟ್ರೀಯ ಹೆಲಿಕಾಪ್ಟರ್ ದಿನವೆಂದು ಟ್ವೀಟ್ ಮಾಡುವ ಮೂಲಕ ಸೆಹ್ವಾಗ್ ಇನ್ನೊಂದು ನಗೆ ಬಾಂಬ್ ಸಿಡಿಸಿದ್ದಾರೆ.

ಧೋನಿ ಇಂದಿಗೆ 35ನೇ ವರ್ಷ ಪೂರೈಸಿದ್ದು ಭಾರತದ ನಾಯಕನಿಗೆ ಶುಭಾಶಯ ಹೇಳಿದವರಲ್ಲಿ ಸೆಹ್ವಾಗ್ ಕೂಡ ಸೇರಿದ್ದಾರೆ. ''ಹುಟ್ಟು ಹಬ್ಬದ ಶುಭಾಶಯಗಳು. ಅನ್‌ಹೋನಿ ಕೊ ಹೋನಿ ಮುಂದುವರಿಯಲಿ, ನ್ಯಾಷನಲ್ ಹೆಲಿಕಾಪ್ಟರ್ ಡೇ'' ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದರು.
 
ಧೋನಿ ಶೋಧಿಸಿದ ಹೆಲಿಕಾಪ್ಟರ್ ಶಾಟ್ ಉದಾಹರಿಸಿ ಸೆಹ್ವಾಗ್ ಮೇಲಿನ ಟ್ವೀಟ್ ಮಾಡಿದ್ದಾರೆ. ಫುಲ್ ಲೆಂಗ್ತ್ ಎಸೆತಗಳಿಗೆ ಧೋನಿ ಬ್ಯಾಟನ್ನು ಸುರುಳಿಯಂತೆ ತಿರುಗಿಸಿ ಸಿಕ್ಸರ್‌ಗೆ ಅಟ್ಟುವ ಶೈಲಿ ಹೆಲಿಕಾಪ್ಟರ್ ಶಾಟ್ ಎಂದೇ ಹೆಸರಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ