ಚೇತೇಶ್ವರ ಪೂಜಾರ ಸುದೀರ್ಘ ಬ್ಯಾಟಿಂಗ್ ಗೆ ಆನ್ ಲೈನ್ ಲ್ಲಿ ತಮಾಷೆಯ ಮೆಚ್ಚುಗೆಗಳು
ಸೋಮವಾರ, 20 ಮಾರ್ಚ್ 2017 (08:39 IST)
ರಾಂಚಿ: ಆಸ್ಟ್ರೇಲಿಯಾ ವಿರುದ್ಧ ತೃತೀಯ ಟೆಸ್ಟ್ ಪಂದ್ಯದಲ್ಲಿ ಬರೋಬ್ಬರಿ 11 ಗಂಟೆಗಳ ಮ್ಯಾರಥಾನ್ ಬ್ಯಾಟಿಂಗ್ ನಡೆಸಿದ ಚೇತೇಶ್ವರ ಪೂಜಾರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮಾಷೆ ರೂಪದಲ್ಲಿ ಮೆಚ್ಚುಗೆಗಳು ವ್ಯಕ್ತವಾಗಿದೆ.
ಚೇತೇಶ್ವರ ಪೂಜಾರ 11 ಗಂಟೆ ಬ್ಯಾಟಿಂಗ್ ನಡೆಸಿರುವಷ್ಟು ರೋಹಿತ್ ಶರ್ಮಾ ತಮ್ಮ ಟೆಸ್ಟ್ ಕೆರಿಯರ್ ಆಡಿಲ್ಲ ಎಂದು ಕೆಲವರು ಕಿಚಾಯಿಸಿದ್ದರೆ, ಇನ್ನು ಕೆಲವರು ರಾತ್ರಿಯಾಯ್ತು. ತಂಡದ ಆಟಗಾರರೆಲ್ಲಾ ಮನೆಗೆ ಮರಳಿದ್ದಾರೆ. ಪೂಜಾರ ಬಂದಿದ್ದಾರೋ ಅಥವಾ ಇನ್ನೂ ಮೈದಾನದಲ್ಲೇ ಇದ್ದಾರೋ..?
2020 ರ ವೇಳೆಗೆ ಕೊಹ್ಲಿಗೆ ಮದುವೆಯಾಗಿರುತ್ತಾರೆ. ರೆಹಾನೆ ಎರಡು ಮಕ್ಕಳ ತಂದೆಯಾಗಿರುತ್ತಾರೆ. ಆದರೆ ಪೂಜಾರ ಮಾತ್ರ ಇನ್ನೂ ಬ್ಯಾಟಿಂಗ್ ಮಾಡುತ್ತಲೇ ಇರುತ್ತಾರೆ ಎಂದು ಕಾಲೆಳೆದಿದ್ದಾರೆ. ಪೂಜಾರ ಎರಡು ದಿನ ನಿಂತು ದಾಖಲೆಯ 525 ಎಸೆತ ಎದುರಿಸಿ 202 ರನ್ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೂಜಾರಗೆ ವಿಶಿಷ್ಟ ರೀತಿಯಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ