ವೆಸ್ಟ್ಇಂಡಿಸ್ , ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಸ್ಪೋಟಕ ಬ್ಯಾಟ್ಸಮನ್ ಕ್ರಿಸ್ ಗೇಲ್ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ!. ಅವರು ಬಾರಿಸಿದ ಸಿಕ್ಸರ್ ಕಣ್ಣಿಗೆ ಕಾಣದಷ್ಟು ದೂರ ಹೋಗಿ ಬೀಳುವುದು ಸಾಮಾನ್ಯವೇ ಬಿಡಿ. ಅದನ್ನು ಹುಡುಕುವ ಸಾಹಸಕ್ಕೂ ಯಾರೂ ಹೋಗಲಾರರು.
ಭಾನುವಾರ ಕೆಂಟ್ ವಿರುದ್ಧದ ಟಿ20 ಪಂದ್ಯದಲ್ಲಿ ಸಾಮರ್ಸೆಟ್ ತಂಡದ ಪರ ಆಡುತ್ತಿದ್ದ ಗೇಲ್ ಸಿಕ್ಸರ್ ಒಂದನ್ನು ಎತ್ತಿದರು. ಆ ಚೆಂಡು ಕ್ರೀಡಾಂಗಣವನ್ನು ದಾಟಿ ಹತ್ತಿರದಲ್ಲಿ ಹರಿಯುತ್ತಿದ್ದ ನದಿಯೊಂದರಲ್ಲಿ ಬಿತ್ತು. ಚೆಂಡು ಎಲ್ಲಿ ಹೋಗಿ ಬೀಳುತ್ತದೆ ಎಂದು ನೋಡುತ್ತಿದ್ದ ಅವರ ಅಭಿಮಾನಿ ಕಾರ್ನವೆಲ್ ಮಾರ್ಟಿನ್ ಎಂಬ ಯುವಕ ತಣ್ಣಗೆ ಕೊರೆಯುವ ಚಳಿಯಲ್ಲೂ ನದಿಗೆ ಹಾರಿ ಬಾಲ್ ಎತ್ತಿಕೊಂಡೇ ಮರಳಿದ.