ಕ್ರಿಕೆಟಿಗ ಅಮಿತ್ ಮಿಶ್ರಾ ವಿರುದ್ಧದ ಕೇಸ್ ವಾಪಸ್ ಪಡೆದ ವಂದನಾ ಜೈನ್

ಗುರುವಾರ, 22 ಅಕ್ಟೋಬರ್ 2015 (18:04 IST)
ಟೀಂ ಇಂಡಿಯಾ ತಂಡದ ಕ್ರಿಕೆಟಿಗ ಅಮಿತ್ ಮಿಶ್ರಾ ನಿರಾಳರಾಗುವಂತಹ ಸುದ್ದಿ ಬಂದಿದೆ. ಮಿಶ್ರಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯದ ದೂರು ಸಲ್ಲಿಸಿದ್ದ ಮಹಿಳೆ ದೂರು ಹಿಂಪಡೆಯಲು ನಿರ್ಧರಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.
 
ದೂರು ದಾಖಲಿಸಿ ಎರಡು ದಿನಗಳ ನಂತರ ಪೊಲೀಸ್ ಠಾಣೆಗೆ ತೆರಳಿ, ದೂರನ್ನು ಹಿಂಪಡೆಯಲು ನಿರ್ಧರಿಸಿದ್ದಾಗಿ ವಂದನಾ ಜೈನ್ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
 
ಅಮಿತ್ ಮಿಶ್ರಾ ಬೆಂಗಳೂರಿನ ಪೊಲೀಸ್ ಠಾಣೆಗೆ ಆಗಮಿಸುವದನ್ನೇ ಕಾಯುತ್ತಿದ್ದೇನೆ. ನಾವಿಬ್ಬರು ಪರಸ್ಪರರ ಸಹಮತಿಯಿಂದ ಕೇಸ್ ವಾಪಸ್ ಪಡೆಯುತ್ತೇವೆ. ನಾವು ಗೆಳೆಯರಾಗಿದ್ದೇವೆ. ಜಗಳವು ಆಡಿದ್ದೇವೆ. ಮುಂದೆ ಗೆಳೆಯರಾಗಿರಲು ಬಯಸಿದ್ದೇವೆ ಎಂದು ತಿಳಿಸಿದ್ದಾರೆ.
 
ಅಮಿತ್ ಮಿಶ್ರಾ ವಾರದೊಳಗಾಗಿ ಪೊಲೀಸ್ ಠಾಣೆಗೆ ಹಾಜರಾಗುವಂತೆ ಪೊಲೀಸರು ಕೋರಿದ್ದಾರೆ. ಮಿಶ್ರಾ ವಿರುದ್ಧ 354 ಕಾಯ್ದೆಯನ್ನು ದಾಖಲಿಸಲಾಗಿತ್ತು. ತಾವು ಯಾವುದೇ ಒತ್ತಡದಿಂದ ಕೇಸ್ ಹಿಂಪಡೆಯುತ್ತಿಲ್ಲ ಎಂದು ಜೈನ್ ಸ್ಪಷ್ಟಪಡಿಸಿದ್ದಾರೆ.
 
ನನಗೆ ಬಿಸಿಸಿಐಯಾಗಲಿ ಅಥವಾ ಇನ್ನಾವುದೇ ಕಡೆಯಿಂದಾಗಲಿ ಕೇಸ್ ಹಿಂಪಡೆಯುವಂತೆ ಒತ್ತಡವಿಲ್ಲ. ನಾನು ಕೇಸ್ ಹಿಂಪಡೆಯುತ್ತಿದ್ದೇನೆ ಎನ್ನುವ ಮಾಹಿತಿ ಮಾಧ್ಯಮದವರಿಗೆ ತಿಳಿದಿರುವ ಬಗ್ಗೆ ಆಶ್ಚರ್ಯವಾಗಿದೆ ಎಂದು ವಂದನಾ ಜೈನ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ