ಶ್ರೀಶಾಂತ್ ಮೇಲಿನ ನಿಷೇಧ ಪ್ರಶ್ನಿಸಿ ಬಿಸಿಸಿಐಗೆ ನೋಟೀಸ್

ಮಂಗಳವಾರ, 23 ಮೇ 2017 (09:41 IST)
ಕೊಚ್ಚಿ: ಕೇರಳದ ವೇಗಿ ಶ್ರೀಶಾಂತ್ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಮುಕ್ತಿ ಹೊಂದಿದ್ದರೂ, ಅವರಿಗೆ ಆಡಲು ಅವಕಾಶ ನೀಡದ ಬಿಸಿಸಿಐಗೆ ಕೇರಳ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.

 
ಬಿಸಿಸಿಐ ಆಡಳಿತಾಧಿಕಾರಿಗಳ ಮುಖ್ಯಸ್ಥ ವಿನೋದ್ ರೈಗೆ ಶ್ರೀಶಾಂತ್ ಮೇಲಿನ ತೆರವು ನಿಷೇಧ ಹಿಂಪಡೆಯದ ನಿರ್ಧಾರವನ್ನು ಹೈ ಕೋರ್ಟ್ ನಿಷೇಧಿಸಿದೆ. ಐಪಿಎಲ್-6 ರಲ್ಲಿ ಶ್ರೀಶಾಂತ್ ಮೇಲೆ ಕಳಂಕ ತಟ್ಟಿತ್ತು.

ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಯ ನಂತರ ಶ್ರೀಶಾಂತ್ ದೋಷಮುಕ್ತರಾದ ಮೇಲೂ ಶ್ರೀಶಾಂತ್ ಗೆ ಕ್ಲಬ್ ಲೆವೆಲ್ ಕ್ರಿಕೆಟ್ ನಲ್ಲಿ ಆಡಲು ನಿರಪೇಕ್ಷಣಾ ಪತ್ರ ನೀಡಲು ಬಿಸಿಸಿಐ ನಿರಾಕರಿಸಿತ್ತು. ಅಲ್ಲದೆ, ಯಾವುದೇ ಕಾರಣಕ್ಕೂ ಶ್ರೀಶಾಂತ್ ಮೇಲಿನ ನಿಷೇಧ ತೆರವುಗೊಳಿಸುವುದಿಲ್ಲ ಎಂದಿತ್ತು.

ಇದರ ವಿರುದ್ಧ ಶ್ರೀಶಾಂತ್ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಬಿಸಿಸಿಐಗೆ ನ್ಯಾಯಾಲಯ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ