ಏನೇ ಮಾಡಿದರೂ ಡೇವಿಡ್ ವಾರ್ನರ್ ಗೆ ವೀರೇಂದ್ರ ಸೆಹ್ವಾಗ್ ದಾಖಲೆ ಮೀರಲಾಗಲಿಲ್ಲ

ಬುಧವಾರ, 4 ಜನವರಿ 2017 (10:49 IST)
ಸಿಡ್ನಿ: ಆಸ್ಟ್ರೇಲಿಯಾದ ಹೊಡೆ ಬಡಿಯ ಬ್ಯಾಟ್ಸ್ ಮನ್ ಡೇವಿಡ್ ವಾರ್ನರ್ ಮೊದಲ ಅವಧಿಯಲ್ಲೇ ಶತಕ ಬಾರಿಸಿದ ವಿಶ್ವದ ಐದನೇ ಬ್ಯಾಟ್ಸ್ ಮನ್ ಎಂಬ ಗೌರವ ಸಂಪಾದಿಸಿದ್ದರು. ಆದರೆ ವಾರ್ನರ್ ಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ದಾಖಲೆ ಅಳಿಸಲಾಗಲಿಲ್ಲ.


ವಾರ್ನರ್ ಅತೀ ವೇಗವಾಗಿ ಶತಕ ಪೂರೈಸಿದ ದಾಖಲೆ ಮಾಡಿದರೂ, ಅತೀ ಕಡಿಮೆ ಓವರ್ ನಲ್ಲಿ ಶತಕ ದಾಖಲಿಸಿದ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಈ ದಾಖಲೆ ಭಾರತದ ಸೆಹ್ವಾಗ್ ಹೆಸರಿನಲ್ಲಿದೆ. ಸೆಹ್ವಾಗ್ 25.3 ಓವರ್ ಗಳಲ್ಲಿ ಶತಕ ಪೂರೈಸಿದ್ದರು. ಈ ದಾಖಲೆಯನ್ನು ಅವರು 2001 ರಲ್ಲಿ ಮಾಡಿದ್ದರು.

ಆದರೆ ವಾರ್ನರ್ ಗೆ ನಿನ್ನೆ ಶತಕ ಪೂರೈಸಲು 26.2 ಓವರ್ ಬೇಕಾಯಿತು. ಸೆಹ್ವಾಗ್ ನಾಲ್ಕು ಬಾರಿ 35 ಓವರ್ ನ ಒಳಗೇ ಶತಕ ದಾಖಲಿಸಿದ ಸಾಧನೆ ಮಾಡಿದ್ದರು. ಹಾಗಾಗಿ ವಾರ್ನರ್ ಗಿಂತ ಸೆಹ್ವಾಗ್ ಸಿಡಿಲ ಮರಿ ಎನ್ನುವುದು ಸಾಬೀತಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ