ಕ್ರಿಕೆಟಿಗ ಇರ್ಫಾನ್ ಪಠಾಣ್ ಗೂ ತಟ್ಟಿದ ಕಾಶ್ಮೀರ ಬಿಸಿ

ಸೋಮವಾರ, 5 ಆಗಸ್ಟ್ 2019 (10:35 IST)
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗಿರುವ ವಿದ್ಯಮಾನಗಳ ಬೆನ್ನಲ್ಲೇ ಕ್ರಿಕೆಟಿಗ ಇರ್ಫಾನ್ ಪಠಾಣ್ ಮತ್ತು ಜಮ್ಮು ಕ್ರಿಕೆಟ್ ತಂಡಕ್ಕೆ ತಕ್ಷಣವೇ ಕಾಶ್ಮೀರ ಬಿಡಲು ಸೂಚಿಸಲಾಗಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.


ಜಮ್ಮು ತಂಡದ ಆಟಗಾರ ಮತ್ತು ಮೆಂಟರ್ ಕೂಡಾ ಆಗಿರುವ ಇರ್ಫಾನ್ ಪಠಾಣ್ ಮತ್ತು ತಂಡಕ್ಕೂ ತಕ್ಷಣದಿಂದಲೇ ಜಮ್ಮುವಿನಿಂದ ಹೊರ ಹೋಗಲು ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಇರ್ಫಾನ್ ನನ್ನ ಹೃದಯ ಮತ್ತು ಮನಸ್ಸು ಯಾವತ್ತೂ ಜಮ್ಮು ಕಾಶ್ಮೀರದ ಜನತೆ ಮತ್ತು ಭಾರತೀಯ ಸೇನೆಯ ಜತೆಗಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ