ಬಿಸಿಸಿಐ ವಿರುದ್ಧ ವಾರ್ ಡಿಕ್ಲೇರ್ ಮಾಡಲು ವಿದೇಶಿ ಕಾನೂನು ಪ್ರತಿನಿಧಿಗಳ ಮೊರೆ ಹೋದ ಕ್ರಿಕೆಟಿಗ ಶ್ರೀಶಾಂತ್

ಭಾನುವಾರ, 5 ಫೆಬ್ರವರಿ 2017 (07:25 IST)
ನವದೆಹಲಿ:  ಕೇರಳದ ಕ್ರಿಕೆಟಿಗ ಶ್ರೀಶಾಂತ್ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಮುಕ್ತರಾದ ಮೇಲೆ ಅವಕಾಶ ನಿರೀಕ್ಷೆಯಲ್ಲಿ ಬಿಸಿಸಿಐ ಬಾಗಿಲು ತಟ್ಟಿ ನಿರಾಸೆಗೊಂಡಿದ್ದರು. ಹೀಗಾಗಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

 
ದೆಹಲಿ ಕೋರ್ಟ್ ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದಿಂದ ಮುಕ್ತಗೊಳಿಸಿದ ನಂತರ ಸ್ಕಾಟ್ ಲೆಂಡ್ ಕ್ಲಬ್ ಕ್ರಿಕೆಟ್ ನಲ್ಲಿ ಆಡಲು ಬಿಸಿಸಿಐ ಅನುಮತಿ ಕೋರಿ ಶ್ರೀಶಾಂತ್ ಪತ್ರ ಬರೆದಿದ್ದರು. ಆದರೆ ಭಾರತ ಕ್ರಿಕೆಟ್ ಮಂಡಳಿ ನಿರಾಪೇಕ್ಷಣಾ ಪತ್ರ ನೀಡಲು ನಿರಾಕರಿಸಿತು.

ನಂತರ ಮಾಧ್ಯಮಗಳ ಮುಂದೆ ಬಂದ ಶ್ರೀಶಾಂತ್ ದೆಹಲಿ ಪೊಲೀಸರು ತಮಗೆ ನೀಡಿದ ಕಿರುಕುಳದ ಬಗ್ಗೆ ವಿವರಿಸಿದ್ದರು. ಅಲ್ಲದೆ ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಕಾರ ಆಕಾಶ್ ಚೋಪ್ರಾ ಜತೆಗೆ ಟ್ವಿಟರ್ ನಲ್ಲಿ ಮಾತಿನ ಚಕಮಕಿ ನಡೆಸಿದ್ದರು. ಇದರ ಬೆನ್ನಲ್ಲೇ ಶ್ರೀಶಾಂತ್ ಇದೀಗ ಕಾನೂನು ಸಮರಕ್ಕೆ ಮುಂದಾಗಿರುವ ಸುದ್ದಿ ಬಂದಿದೆ.

ಇದಕ್ಕಾಗಿ ಬ್ರಿಟನ್ ಮತ್ತು ಸ್ವಿಜರ್ ಲ್ಯಂಡ್ ನಲ್ಲಿರುವ ಕಾನೂನು ತಜ್ಞರೊಂದಿಗೆ ಸಮಲೋಚನೆ ನಡೆಸಿದ್ದಾರೆ ಎಂದು ವರದಿಯಾಗಿದೆ.  ಬಿಸಿಸಿಐ ಶ್ರೀಶಾಂತ್ ಮನವಿಗೆ ಕಿಮ್ಮತ್ತು ನೀಡದ ಕಾರಣ ಕಾನೂನು ಹೋರಾಟ ಮಾಡಿ ತಮಗೆ ಬೇಕಾಗಿದ್ದನ್ನು ಪಡೆಯದೇ ಅವರಿಗೆ ಬೇರೆ ವಿಧಿಯಿಲ್ಲ ಎಂದು ಮೂಲಗಳು ಹೇಳಿವೆ. ಇದೆಲ್ಲಾ ಎಲ್ಲಿಗೆ ಬಂದು ತಲುಪುತ್ತದೋ ಎಂದು ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ