ಮೊನ್ನೆಯಷ್ಟೇ ಬಾಲಿಶ ಎಂದು ಕರೆದವರು ಇಂದು ವಿರಾಟ್ ಕೊಹ್ಲಿಯನ್ನು ಮಿ.ಪರ್ಫೆಕ್ಟ್ ಕ್ಯಾಪ್ಟನ್ ಎಂದರು!

ಭಾನುವಾರ, 18 ಫೆಬ್ರವರಿ 2018 (09:17 IST)
ನವದೆಹಲಿ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತಾಗ ವಿರಾಟ್ ಕೊಹ್ಲಿಯನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡವರೆಲ್ಲಾ ಇದೀಗ ಏಕದಿನ ಸರಣಿ ಗೆದ್ದಾಗ ಮಿ.ಪರ್ಫೆಕ್ಟ್, ವಿಶ್ವದ ಶ್ರೇಷ್ಠ ನಾಯಕ ಎಂದು ಗುಣಗಾನ ಮಾಡುತ್ತಿದ್ದಾರೆ. ಇದರಿಂದಾಗಿಯೇ ಮಾಜಿ ಕ್ರಿಕೆಟಿಗರು ಬೆಲೆ ಕಳೆದುಕೊಳ್ಳುತ್ತಿದ್ದಾರೆ.
 

ಟೆಸ್ಟ್ ಸರಣಿ ಸೋತಾಗ ವೀರೇಂದ್ರ ಸೆಹ್ವಾಗ್ ವಿರಾಟ್ ಕೊಹ್ಲಿಯನ್ನು ಪ್ರಶ್ನಿಸುವವರು ಯಾರೂ ಇಲ್ಲ. ಅದಕ್ಕೆ ಬೇಕಾಬಿಟ್ಟಿ ತಂಡದ ಆಯ್ಕೆ ಮಾಡುತ್ತಿದ್ದಾರೆ. ಒಂದು ವೇಳೆ ತಾವು ಒಂದು ಪಂದ್ಯದಲ್ಲಿ ಪ್ರದರ್ಶನ ನೀಡಿಲ್ಲವೆಂದರೆ ತಾವೂ ಹೊರಗುಳಿಯುತ್ತಾರಾ ಎಂದೆಲ್ಲಾ ಜರೆದಿದ್ದರು.

ಇದೀಗ ಏಕದಿನ ಸರಣಿ ಗೆಲ್ಲುತ್ತಿದ್ದಂತೆ ಸೆಹ್ವಾಗ್ ವರಸೆಯೇ ಬದಲಾಗಿದೆ. ಸರಣಿಯಲ್ಲಿ ಮೂರು ಶತಕ ಸಿಡಿಸಿದ್ದಲ್ಲದೆ, ತಂಡಕ್ಕೆ ಭರ್ಜರಿ ಜಯ ದೊರಕಿಸಿಕೊಡುತ್ತಿದ್ದಂತೆ ಕೊಹ್ಲಿಯನ್ನು ವಿಶ್ವ ಶ್ರೇಷ್ಠ ನಾಯಕ ಎಂದು ಕೊಂಡಾಡಿದ್ದಾರೆ. ಹಾಗಿದ್ದರೆ ಒಂದೇ ತಿಂಗಳ ಅವಧಿಗೆ ಕೊಹ್ಲಿ ವಿಶ್ವಶ್ರೇಷ್ಠ ನಾಯಕರಾದರೇ? ಒಂದು ಸರಣಿ ಗೆಲುವಿನಿಂದ ಹುಳುಕಗಳೆಲ್ಲಾ ಮುಚ್ಚಿ ಹೋಯ್ತೇ?

ಸೆಹ್ವಾಗ್ ರೀತಿಯೇ ಹಲವು ದೇಶ, ವಿದೇಶದ ಮಾಜಿ ಕ್ರಿಕೆಟಿಗರೂ ಕೊಹ್ಲಿ ನಾಯಕತ್ವವನ್ನು ಟೀಕಿಸಿದವರೂ ಇಂದು ಹೊಗಳಿಕೆಯ ಸುರಿಮಳೆಗೈಯುತ್ತಿದ್ದಾರೆ. ಸೋಲು ಗೆಲುವೆಂಬುದು ಆಟದಲ್ಲಿ ಸಾಮಾನ್ಯ. ಆದರೆ ಆಟದಲ್ಲಿ ತಜ್ಞರೆನಿಸಿಕೊಂಡವರೇ ಈ ರೀತಿ ಸೋತಾಗ ಆಳಿಗೊಂದು ಕಲ್ಲು ಎಂಬಂತೆ ಗೆದ್ದಾಗ ಹೊಗಳಿ ಅಟ್ಟಕ್ಕೇರಿಸಿದರೆ ತಪ್ಪು ದಾರಿಗೆಳೆದಂತಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ