ಅರ್ಧದಲ್ಲೇ ಮೈದಾನ ಬಿಟ್ಟು ಹೊರನಡೆದ ಡೇವಿಡ್ ವಾರ್ನರ್: ಭಾರತಕ್ಕೆ ಶುಭ ಸುದ್ದಿ!

ಸೋಮವಾರ, 30 ನವೆಂಬರ್ 2020 (09:09 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ಆಸೀಸ್ ಆರಂಭಿಕ ಡೇವಿಡ್ ವಾರ್ನರ್ ಅರ್ಧದಲ್ಲೇ ಮೈದಾನ ಬಿಟ್ಟು ಹೊರನಡೆದಿದ್ದಾರೆ.


ತೊಡೆಸಂಧಿನ ನೋವಿಗೊಳಗಾದ ಹಿನ್ನಲೆಯಲ್ಲಿ ವಾರ್ನರ್ ಅರ್ಧದಲ್ಲೇ ಪೆವಿಲಿಯನ್ ಗೆ ಮರಳಿದ್ದಾರೆ. ತಕ್ಷಣವೇ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಒಂದು ವೇಳೆ ವಾರ್ನರ್ ಮುಂದಿನ ಪಂದ್ಯಗಳಿಗೆ ಅಲಭ್ಯರಾದರೆ ಭಾರತ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಯಾಕೆಂದರೆ ಕಳೆದ ಎರಡೂ ಪಂದ್ಯಗಳಲ್ಲಿ ಅವರು ಹೊಡೆಬಡಿಯ ಆರಂಭ ನೀಡಿ ಭಾರತದ ವಿರುದ್ಧ ಬೃಹತ್ ಮೊತ್ತ ಪೇರಿಸಲು ಕಾರಣರಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ