ಭಾರತ-ಆಸ್ಟ್ರೇಲಿಯಾ ಏಕದಿನ: ಮತ್ತೊಂದು ಬೃಹತ್ ಮೊತ್ತ ಪೇರಿಸಿದ ಆಸ್ಟ್ರೇಲಿಯಾ

ಭಾನುವಾರ, 29 ನವೆಂಬರ್ 2020 (13:03 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯವನ್ನು ಗೆಲ್ಲಲು ಆಸ್ಟ್ರೇಲಿಯಾ ಭಾರತಕ್ಕೆ 390 ರನ್ ಗಳ ಬೃಹತ್ ಗುರಿ ನೀಡಿದೆ.


ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿದೆ. ಮೊನ್ನೆಯಂತೇ ಹೊಡೆಬಡಿಯ ಆಟವಾಡಿದ ಆಸ್ಟ್ರೇಲಿಯನ್ನರು ಭಾರತೀಯ ಬೌಲರ್ ಗಳನ್ನು ಬೆವರಿಳಿಸಿದರು. ಡೇವಿಡ್ ವಾರ್ನರ್ 83 ರನ್ ಗಳಿಸಿ ರನೌಟ್ ಆದರೆ, ಏರಾನ್ ಫಿಂಚ್ 60 ರನ್ ಗಳಿಸಿ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದರು. ಆದರೆ ಮೂರನೇ ಕ್ರಮಾಂಕದಲ್ಲಿ ಮತ್ತೆ ಸ್ಪೋಟಕ ಶತಕ ಸಿಡಿಸಿದ ಸ್ಟೀವ್ ಸ್ಮಿತ್ ಕೇವಲ 64 ಎಸೆತಗಳಿಂದ 104 ರನ್ ಗಳಿಸಿ ತಂಡಕ್ಕೆ ಬೃಹತ್ ಮೊತ್ತ ನೀಡಲು ಕಾರಣರಾದರು. ಮಾರ್ನಸ್ ಲಬುಶೇನ್ ರನ್ ಗಳಿಸಿದರು. ಕೊನೆಯಲ್ಲಿ ಬಂದ ಗ್ಲೆನ್ ಮ್ಯಾಕ್ಸ್ ವೆಲ್ ಕೇವಲ 29 ಎಸೆತಗಳಲ್ಲಿ 63 ರನ್ ಚಚ್ಚಿ ತಂಡದ ಮೊತ್ತವನ್ನು 389 ಕ್ಕೆ ತಲುಪಿಸಿದರು. ಭಾರತದ ಪರ ಶಮಿ, ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 1 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ