ಭಾರತ ಸರಣಿಗಾಗಿ ಭೀಮಗಾತ್ರ ಬ್ಯಾಟ್ ಹಿಡಿಯಲಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್

ಬುಧವಾರ, 11 ಜನವರಿ 2017 (09:53 IST)
ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೀಗ ಭಾರತ ಟೆಸ್ಟ್ ಸರಣಿಯದ್ದೇ ಚಿಂತೆ. ಎಲ್ಲಾ ಆಟಗಾರರು ಸಿರಿಯೆಸ್ ಆಗಿ ಸರಣಿಗೆ ರೆಡಿ ಆಗುತ್ತಿದ್ದಾರೆ. ಇತ್ತೀಚೆಗಷ್ಟೇ ದಾಖಲೆಯ ಶತಕ ಸಿಡಿಸಿದ್ದ ಡೇವಿಡ್ ವಾರ್ನರ್ ಈ ಸರಣಿಗೆಂದೇ ವಿಶೇಷವಾಗಿ ಭೀಮಗಾತ್ರದ ಬ್ಯಾಟ್ ರೆಡಿ ಮಾಡಿಸುತ್ತಿದ್ದಾರಂತೆ.

ಭಾರತ ಸ್ಪಿನ್ ಪಿಚ್ ಗಳಿಗೆ ಹೆಸರು ವಾಸಿ. ಇಲ್ಲಿ ಬಾಲ್ ಹೆಚ್ಚು ಎತ್ತರಕ್ಕೆ ಪುಟಿಯುವುದಿಲ್ಲ. ಲೋ ಬೌನ್ಸ್ ಪಿಚ್ ಗಳೇ ಹೆಚ್ಚು. ಹೀಗಾಗಿ ಇಲ್ಲಿನ ಪಿಚ್ ಗಳಿಗೆ ಹೊಂದಿಕೆಯಾಗುವಂತಹ ಬ್ಯಾಟ್ ರೆಡಿ ಮಾಡಿಸುತ್ತಿದ್ದಾರಂತೆ ವಾರ್ನರ್.

ಆಸ್ಟ್ರೇಲಿಯಾದ ಪಿಚ್ ಗಳಲ್ಲಿ 1.23 ಕಿ.ಗ್ರಾಂ ತೂಕದ ಬ್ಯಾಟ್ ಬಳಸುತ್ತಿದ್ದ ವಾರ್ನರ್ ಭಾರತೀಯ ಪಿಚ್ ಗಳಲ್ಲಿ 1.28 ಕಿ.ಗ್ರಾಂ. ತೂಕದ ಬ್ಯಾಟ್ ಬಳಸಲಿದ್ದಾರೆ. ಅದರಲ್ಲೂ ಇದನ್ನು ರವಿಚಂದ್ರನ್ ಅಶ್ವಿನ್ ಸೇರಿದಂತೆ ಭಾರತ ಸ್ಪಿನ್ನರ್ ಗಳನ್ನು ಎದುರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆಯಂತೆ.  ಸದ್ಯ ಪ್ರಚಂಡ ಫಾರ್ಮ್ ನಲ್ಲಿರುವ ವಾರ್ನರ್ ಭಾರತದಲ್ಲೂ ಅದೇ ಫಾರ್ಮ್ ಮುಂದುವರಿಸಬೇಕೆಂಬ ಆಸೆಯಿಂದ ಇಷ್ಟೆಲ್ಲಾ ಸರ್ಕಸ್ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ