ಗೌರವಿಸಲು ಹೋಗಿ ಸೆಹ್ವಾಗ್, ಕರುಣ್ ನಾಯರ್ ಗೆ ಅವಮಾನ ಮಾಡಿದ ದೆಹಲಿ ಕ್ರಿಕೆಟ್ ಸಂಸ್ಥೆ

ಬುಧವಾರ, 1 ನವೆಂಬರ್ 2017 (09:36 IST)
ನವದೆಹಲಿ: ವೀರೇಂದ್ರ ಸೆಹ್ವಾಗ್ ರ ಗೌರವಾರ್ಥವಾಗಿ ದೆಹಲಿ ಕ್ರಿಕೆಟ್ ಸಂಸ್ಥೆ ಫಿರೋಜ್ ಶಾ ಕೋಟ್ಲಾ ಮೈದಾನದ ಒಂದು ಹೆಬ್ಬಾಗಿಲಿಗೆ ಸೆಹ್ವಾಗ್ ಹೆಸರು ಇಟ್ಟಿದೆ. ಆದರೆ ಹೀಗೆ ಮಾಡುವಾಗ ಎಡವಟ್ಟು ಮಾಡಿಕೊಂಡಿದೆ.

 
‘ಲೆಜೆಂಡ್ಸ್ ಫಾರ್ ಎವರ್’ ಎಂಬ ಶೀರ್ಷಿಕೆಯ ಜತೆಗೆ ಸೆಹ್ವಾಗ್  ಫೋಟೋ ಹಾಗೂ ಅವರ ಸಾಧನೆಗಳ ವಿವರ ಹಾಕಿದ ಡಿಡಿಸಿಎ ಒಂದು ಎಡವಟ್ಟೂ ಮಾಡಿದೆ. ‘ತ್ರಿಶತಕ ಗಳಿಸಿದ ಏಕೈಕ ಭಾರತೀಯ ಆಟಗಾರ’ ಎಂದು ಒಕ್ಕಣೆ ಬರೆದಿದೆ.

ಅಸಲಿಗೆ ಭಾರತದ ಪರ ಮೊದಲ ತ್ರಿಶತಕ ಬಾರಿಸಿದ್ದು ಸೆಹ್ವಾಗ್ ಅವರೇ. ಅದೂ ಎರಡೆರಡು ಬಾರಿ. ಆದರೆ ಏಕೈಕ ಭಾರತೀಯನಲ್ಲ. ಇತ್ತೀಚೆಗಷ್ಟೇ ಕನ್ನಡಿಗ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಗಳಿಸಿದ್ದರು. ಇದನ್ನು ಮರೆತು ಡಿಡಿಸಿಎ ಈ ರೀತಿ ಎಡವಟ್ಟು ಮಾಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ