ಬ್ಯಾಕ್ ಟು ಬ್ಯಾಕ್ ಸೆಂಚುರಿ: ದಾಖಲೆ ಮಾಡಿದ ದೇವದತ್ತ್ ಪಡಿಕ್ಕಲ್
ಆದರೆ ದೇವದತ್ತ್ ಪಡಿಕ್ಕಲ್ ಇದಕ್ಕೂ ಮೊದಲು ಒಡಿಶಾ ವಿರುದ್ಧ 152, ಕೇರಳ ವಿರುದ್ಧ 126, ರೈಲ್ವೇಸ್ ವಿರುದ್ಧ 145 ರನ್ ಗಳಿಸಿದ್ದರು. ಐಪಿಎಲ್ ನಲ್ಲಿ ಆರ್ ಸಿಬಿ ಪರ ಆಡುವ ದೇವದತ್ತ್ ಪಡಿಕ್ಕಲ್ ಕಳೆದ ಸೀಸನ್ ನಲ್ಲಿ ಗಮನ ಸೆಳೆಯುವ ಪ್ರದರ್ಶನ ನೀಡಿದ್ದರು. ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವುದು ನೋಡಿದರೆ ಸದ್ಯದಲ್ಲೇ ಅವರಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಖಾಯಂ ಆದರೂ ಅಚ್ಚರಿಯಿಲ್ಲ.