ಮುಂಬೈ: ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ಭಾರತ ತಂಡವನ್ನು ಆರಿಸುವಾಗ ನಾಯಕ ವಿರಾಟ್ ಕೊಹ್ಲಿಗಿಂತ ಮಾಜಿ ನಾಯಕ ಧೋನಿ ಸಲಹೆಯನ್ನು ಕೇಳಿದೆಯಾ ಆಯ್ಕೆ ಸಮಿತಿ? ಹೀಗೊಂದು ಅನುಮಾನವನ್ನು ಆಯ್ಕೆ ಸಮಿತಿ ಹುಟ್ಟು ಹಾಕಿದೆ.
ಬಹುಶಃ ತಮ್ಮ ಕೊನೆಯ ಪ್ರಮುಖ ಟೂರ್ನಮೆಂಟ್ ಆಡುತ್ತಿರುವ ಧೋನಿ ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆಯಾದ 15 ಸದಸ್ಯರಲ್ಲದೆ, ಇನ್ನೂ ಐದು ಆಟಗಾರರನ್ನು ಸಿದ್ಧರಾಗಿರುವಂತೆ ಮೀಸಲಿರಿಸಲು ಸಲಹೆ ನೀಡಿದ್ದರಂತೆ.
ಅದರಂತೆ ಭವಿಷ್ಯದ ಧೋನಿ ಎಂದೇ ಬಿಂಬಿತವಾಗಿರುವ ರಿಷಬ್ ಪಂತ್, ದಿನೇಶ್ ಕಾರ್ತಿಕ್, ಕುಲದೀಪ್ ಯಾದವ್, ಸುರೇಶ್ ರೈನಾ ಮತ್ತು ಶಾರ್ದೂಲ್ ಠಾಕೂರ್ ಮೀಸಲು ಆಟಗಾರರಾಗಿ ಆಯ್ಕೆಯಾಗಿದ್ದಾರೆ.
ಒಂದು ವೇಳೆ ಈಗಾಗಲೇ ಆಯ್ಕೆಯಾದ 15 ಆಟಗಾರರಲ್ಲಿ ಯಾರಾದರೂ ಗಾಯಗೊಂಡರೆ ಈ ಮೀಸಲು ಆಟಗಾರರು ತಂಡವನ್ನು ಕೂಡಿಕೊಳ್ಳಲಿದ್ದಾರೆ. ಇಂತಹದ್ದೊಂದು ಯೋಜನೆ ರೂಪಿಸುವುದ್ಕೆ ಐಡಿಯಾ ಕೊಟ್ಟಿದ್ದು ಧೋನಿ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಅಲ್ಲಿಗೆ ಧೋನಿ ಪ್ರಭಾವ ಇನ್ನೂ ಹಾಗೇ ಇದೆ ಎಂಬುದು ಸ್ಪಷ್ಟವಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ