ಐಪಿಎಲ್ ಗೂ ಮೊದಲೇ ಶುರುವಾಯ್ತು ಧೋನಿ ಧಮಾಕ

ಭಾನುವಾರ, 26 ಫೆಬ್ರವರಿ 2017 (13:27 IST)
ನವದೆಹಲಿ: ವಿಜಯ್ ಹಜಾರೆ ಟ್ರೋಫಿಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ನಿನ್ನೆಯ ಸೋಲಿನಿಂದ ಎದ್ದು ಬಂದಿದ್ದು, ಇಂದು ಛತ್ತೀಸ್ ಘಡ ತಂಡದ ವಿರುದ್ಧ ಶತಕ ದಾಖಲಿಸಿದ್ದಾರೆ.


ನಿನ್ನೆಯಷ್ಟೇ ಕರ್ನಾಟಕ ವಿರುದ್ಧ ಕೋಲ್ಕೊತ್ತಾದಲ್ಲಿ ನಡೆದ ಪಂದ್ಯದಲ್ಲಿ ಧೋನಿ ನೇತೃತ್ವದ ಜಾರ್ಖಂಡ್ ತಂಡ ಕೇವಲ 5 ರನ್ ಗಳಿಂದ ಸೋಲನುಭವಿಸಿತ್ತು. ಇಂದು ಧೋನಿ ಭರ್ಜರಿ ಶತಕದ ನೆರವಿನಿಂದ  ಜಾರ್ಖಂಡ್ 9 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತ್ತು. ಧೋನಿ 94 ಬಾಲ್ ಗಳಲ್ಲಿ ನಾಲ್ಕು ಸಿಕ್ಸರ್ ಸಹಿತ ಶತಕ ಸಿಡಿಸಿದರು.

ಸದ್ಯಕ್ಕೆ ಎಲ್ಲಾ ತಂಡಗಳ ನಾಯಕತ್ವ ಜವಾಬ್ಧಾರಿ ಕಳೆದುಕೊಂಡು ಕೇವಲ ತವರು ತಂಡದ ನಾಯಕರಾಗಿ ಮುಂದುವರಿದಿರುವ ಧೋನಿ ಬ್ಯಾಟಿಂಗ್ ನಲ್ಲಿ ಭರ್ಜರಿಯಾಗಿ ಮಿಂಚುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ