ವೀರೇಂದ್ರ ಸೆಹ್ವಾಗ್ ಶಾಲೆಯಲ್ಲಿ ವಿದ್ಯಾರ್ಥಿಯಾದ ಧೋನಿ!

ಶನಿವಾರ, 4 ಫೆಬ್ರವರಿ 2017 (08:10 IST)
ನವದೆಹಲಿ: ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ತಮ್ಮದೇ ಶಾಲೆಯೊಂದನ್ನು ನಡೆಸುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.  ಈ ಶಾಲೆಗೆ ನಿನ್ನೆ ವಿಶೇಷ ಅತಿಥಿಯೊಬ್ಬರ ಆಗಮನವಾಗಿದೆ. ಅವರೇ ಕ್ರಿಕೆಟಿಗ ಧೋನಿ.


ಅಸಲಿಗೆ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ. ಸೆಹ್ವಾಗ್ ವೃತ್ತಿ ಜೀವನ ಅರ್ಧಕ್ಕೇ ನಿಲ್ಲಲು ಧೋನಿಯೇ ಕಾರಣ ಎಂಬೆಲ್ಲಾ ರೂಮರ್ ಗಳಿತ್ತು. ಆದರೆ ಧೋನಿ ಸೆಹ್ವಾಗ್ ಸ್ಕೂಲ್ ನಲ್ಲಿ ಕಳೆದ ಕ್ಷಣಗಳನ್ನು ನೋಡಿದರೆ ಇದೆಲ್ಲಾ ನಿಜವೇ ಎಂಬ ಅನುಮಾನಗಳು ಹುಟ್ಟುವುದಂತೂ ನಿಜ.

ತಮ್ಮ ಶಾಲೆಗೆ ಭೇಟಿ ನೀಡಿದ ಧೋನಿಗೆ ಸೆಹ್ವಾಗ್ ತಮ್ಮ ಹೃದಯ ಪೂರ್ವಕ ಧನ್ಯವಾದ ತಿಳಿಸಿದ್ದಾರೆ. ವಿಶೇಷವೆಂದರೆ ಧೋನಿ ಸುಮ್ಮನೇ ಶಾಲೆಗೆ ಭೇಟಿ ನೀಡಿ ಫೋಟೋ ತೆಗೆಸಿಕೊಂಡು ಹೋಗಿಲ್ಲ. ಮಕ್ಕಳ ಜತೆ ಮಕ್ಕಳ ಹಾಗೆ ಕಳೆದು ತಮ್ಮ ಕ್ರಿಕೆಟ್ ಜೀವನದ ಯಶೋಗಾಥೆಯನ್ನು ವಿವರಿಸಿದ್ದಾರೆ. ಅಲ್ಲದೆ ತಮ್ಮನ್ನು ಆಹ್ವಾನಿಸಿದ ಮತ್ತು ತಾವು ದುಡಿದ ಅಮೂಲ್ಯ ಹಣವನ್ನು ಶಾಲೆಗಾಗಿ ವಿನಿಯೋಗಿಸುತ್ತಿರುವ ಸೆಹ್ವಾಗ್ ಗೆ ಅಭಿನಂದನೆ ಸಲ್ಲಿಸಿದ್ದಾರೆ. ಈಗ್ಲೂ ಇವರ ಜೋಡಿ ಮೇಲೆ ಇಲ್ಲ ಸಲ್ಲದ್ದು ಹೇಳಿದರೆ ನಿಮಗೇ ಪಾಪ ಸುತ್ತಿಕೊಂಡೀತು ಹುಷಾರ್!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ