ಮದುವೆ ಆನಿವರ್ಸರಿಗೆ ಪತ್ನಿಗೆ ಧೋನಿ ಕೊಟ್ಟ ದುಬಾರಿ ಉಡುಗೊರೆ

ಮಂಗಳವಾರ, 6 ಜುಲೈ 2021 (09:00 IST)
ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಸಾಕ್ಷಿ ನಿನ್ನೆ ತಮ್ಮ ವೈವಾಹಿಕ ಜೀವನದ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.


ಈ ವಿಶೇಷ ದಿನಕ್ಕೆ ಧೋನಿ ತಮ್ಮ ಪತ್ನಿಗೆ ದುಬಾರಿ ಉಡುಗೊರೆಯೊಂದನ್ನು ಕೊಟ್ಟಿದ್ದಾರೆ. ಈ ಉಡುಗೊರೆಯ ವಿಚಾರವನ್ನು ಸ್ವತಃ ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಪತಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಧೋನಿ ತಮ್ಮ 11 ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸವಿನೆನಪಿಗಾಗಿ ಸಾಕ್ಷಿಗೆ ವಿಂಟೇಜ್ ವೋಲ್ಕ್ಸ್ ವೇಗನ್ ಬೀಟಲ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಧೋನಿಗೆ ಬೈಕ್, ಕಾರ್ ಕ್ರೇಜ್ ಇದೆ. ಇದೀಗ ಅವರ ಮನೆಗೆ ಈ ಹೊಸ ಮಾದರಿಯ ಕಾರು ಸೇರ್ಪಡೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ