ಭವಿಷ್ಯದ ಕುಡಿಗೆ ಧೋನಿ ಕ್ರಿಕೆಟ್ ಪಾಠ
ಅಭ್ಯಾಸ ಸಮಯದಲ್ಲಿ ರಿಷಬ್ ಪಂತ್ ಕಡೆಗೆ ವಿಶೇಷ ಗಮನ ನೀಡುತ್ತಿರುವ ಧೋನಿ ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಗೆ ತಕ್ಕ ತರಬೇತಿ ನೀಡುತ್ತಿದ್ದಾರೆ. 35 ವರ್ಷದ ಧೋನಿ 19 ವರ್ಷದ ಈ ಯುವ ಆಟಗಾರನನ್ನು ಚೆನ್ನಾಗಿಯೇ ತಯಾರು ಮಾಡುತ್ತಿದ್ದಾರೆ. ಈ ಮೂಲಕ ತಾವು ನಿವೃತ್ತಿಯಾಗುವ ಮೊದಲು ಭಾರತ ತಂಡಕ್ಕೆ ಉತ್ತಮ ಆಟಗಾರನನ್ನು ಕೊಡುಗೆಯಾಗಿ ನೀಡಿಯೇ ಸಾಗುವ ಇರಾದೆಯಲ್ಲಿದ್ದಾರೆ.