ಧೋನಿ ಜೀವನಾಧಾರಿತ ಸಿನಿಮಾಕ್ಕೆ ಬ್ರೇಕ್ ?

ಸೋಮವಾರ, 1 ಜೂನ್ 2015 (08:49 IST)
ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜೀವನಾಧಾರಿತ ಚಿತ್ರ 'ದಿ ಅನ್ ಟೋಲ್ಡ್ ಸ್ಟೋರಿ' ಆರಂಭದಿಂದಲೂ ಸಾಕಷ್ಟು ಹವಾ ಎಬ್ಬಿಸಿತ್ತು. ಆದರೆ ಈಗ ಈ ಸಿನಿಮಾ ನಿಂತು ಹೋಗುವ ಸಾಧ್ಯತೆ ಇದೆ ಎಂಬ ಮಾತುಗಳು ಬಾಲಿವುಡ್‌ನಲ್ಲಿ ಹರಿದಾಡುತ್ತಿವೆ. ಜತೆಗೆ ಇದಕ್ಕೆ ಕಾರಣ ಸ್ವತಃ ಧೋನಿಯವರೇ ಎನ್ನಲಾಗುತ್ತಿದೆ.
 
ಸುಶಾಂತ್ ಸಿಂಗ್ ರಜಪೂತ್ ಧೋನಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ನೀರಜ್ ಪಾಂಡೆ ನಿರ್ದೇಶನದಲ್ಲಿ ಚಿತ್ರ ತಯಾರಾಗುತ್ತಿದೆ. ಚಿತ್ರದ ಪೋಸ್ಟರ್ ಕೂಡ ಹೊರ ಬಂದಿದೆ. ಆದರೆ  ಏಕಾಯೇಕಿ ಧೋನಿ 80 ಕೋಟಿಗೆ ಬೇಡಿಕೆ ಇಟ್ಟಿದ್ದೇ ಈ ಚಿತ್ರಕ್ಕೆ ಬ್ರೇಕ್ ಬೀಳಲು ಕಾರಣವಂತೆ. 
 
100 ಕೋಟಿ ರೂಪಾಯಿಯಲ್ಲಿ ನಿರ್ಮಾಣವಾಗುತ್ತಿರುವ  ಮಾಹಿ ಜೀವನಾಧಾರಿತ ಚಿತ್ರಕ್ಕೆ ಧೋನಿ 80ಕೋಟಿ ಕೇಳಿದ್ದನ್ನು ಒಂದು ಮೂಲಗಳ ಪ್ರಕಾರ ನಿಜ. ಧೋನಿ 20 ಕೋಟಿ ಮುಂಗಡವನ್ನು ಸಹ ಪಡೆದಿದ್ದರೆಂದು ಹೇಳಲಾಗುತ್ತಿದೆ. ಆದರೆ  ಕೂಲ್ ಕ್ಯಾಪ್ಟನ್ ಈ ಕುರಿತು ಎಲ್ಲಿ ಕೂಡ ಬಾಯ್ಬಿಟ್ಟಿಲ್ಲ.  
 
ಧೋನಿಯವರಿಗೆ ತಮ್ಮ ಜೀವನಾಧಾರಿತ ಚಿತ್ರ ನಿರ್ಮಾಣವಾಗುವ ಇಷ್ಟವಿರಲಿಲ್ಲ. ಹೀಗಾಗಿ ಅವರು ಭಾರೀ ಮೊತ್ತದ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಸುದ್ದಿ ಸಹ  ಸುಳಿದಾಡುತ್ತಿದೆ.
 
ಏನೇ ಇರಲಿ ತಮ್ಮ ಜೀವನಾಧಾರಿತ ಚಿತ್ರಕ್ಕೆ ಸ್ವತಃ ಧೋನಿಯವರೇ ಮುಳ್ಳಾಗಿದ್ದು ವಿಪರ್ಯಾಸವೇ ಸರಿ. 

ವೆಬ್ದುನಿಯಾವನ್ನು ಓದಿ