ನವದೆಹಲಿ: ಯಾಕೋ ದೆಹಲಿಯ ಹೋಟೆಲ್ ನಲ್ಲಿ ಕ್ರಿಕೆಟಿಗ ಧೋನಿ ಸಂಕಷ್ಟಗಳಿಗೆ ಕೊನೆಯಿಲ್ಲವೆನಿಸುತ್ತದೆ. ಮೊನ್ನೆಯಷ್ಟೇ ಅವರು ತಂಗಿದ್ದ ಹೋಟೆಲ್ ಗೆ ಬೆಂಕಿ ಬಿದ್ದಿತ್ತು. ಇದೀಗ ಮೊಬೈಲ್ ನ್ನೇ ಚೋರರು ಕದ್ದೊಯ್ದಿದ್ದಾರಂತೆ!
ಮೊನ್ನೆ ಬೆಂಕಿ ಬಿದ್ದಿದ್ದ ಅದೇ ಹೋಟೆಲ್ ನಲ್ಲಿ ಮೊಬೈಲ್ ಕಳ್ಳತನವಾಗಿದೆ. ತಮ್ಮ ಮೂರು ಮೊಬೈಲ್ ಕಳುವಾಗಿದೆ ಎಂದು ಧೋನಿ ಥಾನೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಹೋಟೆಲ್ ಗೆ ಬೆಂಕಿ ಬಿದ್ದಾಗ ಗಾಬರಿಯಲ್ಲಿ ಓಡುವಾಗ ಧೋನಿ ಮೊಬೈಲ್ ಮರೆತಿದ್ದರು. ಆದರೆ ನಂತರ ಮರಳಿ ನೋಡಿದಾಗ ಮೊಬೈಲ್ ಇರಲಿಲ್ಲ. ಪರಿಸ್ಥಿತಿಯ ಲಾಭವೆತ್ತಿದ ಚೋರರು ಮೊಬೈಲ್ ಕದ್ದಿದ್ದಾರೆ. ಹೀಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ, ತನಿಖೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ