ಐಸಿಸಿ ನಿಯಮದ ಹೊರತಾಗಿಯೂ ಹೆಲ್ಮೆಟ್ ಇಲ್ಲದೆ ಬ್ಯಾಟಿಂಗ್ ಮಾಡಿದ ಧೋನಿ

ಕೃಷ್ಣವೇಣಿ ಕೆ

ಗುರುವಾರ, 26 ಜನವರಿ 2017 (17:35 IST)
ಕಾನ್ಪುರ: ಹೆಲ್ಮೆಟ್ ಧರಿಸಿದರೂ ಕ್ರಿಕೆಟ್ ಮೈದಾನದಲ್ಲಿ ಇತ್ತೀಚೆಗೆ ಆಗಾಗ ಬಾಲ್ ತಗುಲಿ ದುರಂತಗಳಾಗುವ ವರದಿಗಳು ಬರುತ್ತಿವೆ. ಐಸಿಸಿ ಕೂಡಾ ಫೆಬ್ರವರಿಯಿಂದ ಹೆಲ್ಮೆಟ್ ಕಡ್ಡಾಯ ಎಂದಿದೆ. ಹಾಗಿರುವಾಗ ಧೋನಿ ಇಂದಿನ ಪಂದ್ಯದಲ್ಲೂ ಹೆಲ್ಮೆಟ್ ಇಲ್ಲದೇ ಬ್ಯಾಟಿಂಗ್ ಮಾಡಿದರು.
 

ಸ್ಪಿನ್ನರ್ ಗಳನ್ನು ಎದುರಿಸುವಾಗ ಧೋನಿ ಹೆಲ್ಮೆಟ್ ಕಳಚಿಟ್ಟು ಬ್ಯಾಟಿಂಗ್ ಮಾಡಿದರು. ಧೋನಿ ಹಿಂದೆಯೂ ಹಲವು ಬಾರಿ ಹೆಲ್ಮೆಟ್ ಧರಿಸಿ ಬ್ಯಾಟಿಂಗ್ ನಡೆಸಿದ್ದರು. ಆದರೆ ಇತ್ತೀಚೆಗೆ ದುರಂತಗಳು ಸಂಭವಿಸುತ್ತಿರುವುದರಿಂದ ಬ್ಯಾಟ್ಸ್ ಮನ್ ಗಳು ಹೆಲ್ಮೆಟ್ ಧರಿಸದೇ ಬ್ಯಾಟಿಂಗ್ ಮಾಡುವುದು ಕಡಿಮೆ.

ಇತ್ತೀಚೆಗಷ್ಟೇ ಐಸಿಸಿ ಹೆಲ್ಮೆಟ್ ಧರಿಸದೇ ಆಡುವ, ಅಥವಾ ಸರಿಯಾದ ಹೆಲ್ಮೆಟ್ ಧರಿಸದೇ ಇರುವ ಆಟಗಾರರಿಗೆ ದಂಡ ವಿಧಿಸುವ ಮತ್ತು ಗರಿಷ್ಠ ಶಿಕ್ಷೆಯೆಂದರೆ ಒಂದು ಪಂದ್ಯದ ನಿಷೇಧ ಹೇರುವ ಪ್ರಸ್ತಾಪನೆ ಮುಂದಿಟ್ಟಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ